ADVERTISEMENT

ನಟಿ ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ನಿಧನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 12:23 IST
Last Updated 28 ಸೆಪ್ಟೆಂಬರ್ 2021, 12:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯಾ ಸುಂದರಂ ಅವರು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ತಾಯಿ ವಿಜಯಾ ಸುಂದರಂ ಹಾಗೂ ಅಕ್ಕ ಉಷಾ ಅವರ ಜೊತೆಯಲ್ಲಿಇಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಕುಟುಂಬದೊಂದಿಗೆ ವಿಜಯಲಕ್ಷ್ಮಿ ಚೆನ್ನೈಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರುಎನ್ನಲಾಗಿದೆ.

ಅಕ್ಕ ಉಷಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಪದೇ ಪದೇ ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳುತ್ತಿದ್ದರು.

ADVERTISEMENT

ತಮ್ಮ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಆರ್ಥಿಕ ಸಹಾಯ ಮಾಡುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಈ ಹಿಂದೆ ಹಲವು ಸಲ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.