ADVERTISEMENT

ಬಿಡುಗಡೆಗೆ ಸಜ್ಜಾದ ಅಮರ್ ವಿರಾಜ್, ರಚನಾ ದಶರಥ್ ಅಭಿನಯದ ಅಗ್ರಸೇನಾ

ಮುರುಗೇಶ್ ಕಣ್ಣಪ್ಪ ಆ್ಯಕ್ಷನ್‌–ಕಟ್‌

​ಪ್ರಜಾವಾಣಿ ವಾರ್ತೆ
Published 29 ಮೇ 2023, 4:15 IST
Last Updated 29 ಮೇ 2023, 4:15 IST
ರಚನಾ ದಶರಥ್‌
ರಚನಾ ದಶರಥ್‌   

ಹೊಸಬರಾದ ಅಮರ್ ವಿರಾಜ್ ಹಾಗೂ ರಚನಾ ದಶರಥ್ ಅಭಿನಯಿಸಿರುವ ‘ಅಗ್ರಸೇನಾ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮಮತಾ ಜಯರಾಮರೆಡ್ಡಿ ಈ ಚಿತ್ರದ ನಿರ್ಮಾಪಕರಾಗಿದ್ದು, ಭಜರಂಗಿ ಹರ್ಷ ಜೊತೆ ಕೆಲಸ ಮಾಡಿರುವ ಮುರುಗೇಶ್ ಕಣ್ಣಪ್ಪ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ಚಿತ್ರದ ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ.

‘ಹಿರಿಯನಟ ರಾಮಕೃಷ್ಣ ಅವರು ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದು ಅವರ 200ನೇ ಚಿತ್ರ. ಇದೊಂದು ಕೌಟಂಬಿಕ ಕಥಾಹಂದರ ಹೊಂದಿರುವ ಚಿತ್ರ. ಎರಡು ದಾರಿಯಲ್ಲಿ ಕಥೆ ನಡೆಯುತ್ತದೆ. ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವುದು ಮತ್ತೊಂದು ದಾರಿ. ರಾಮಕೃಷ್ಣ ಅವರ ಪಾತ್ರಕ್ಕೂ ಎರಡು ಶೇಡ್ ಇದೆ. ಬೆಳಗಾವಿಯ ನಾಗರಾಜ ದೇಸಾಯಿ ಅವರ ಚಚ್ಚಡಿ ವಾಡೆಯಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದು ನಿರ್ದೇಶಕರು ಹೇಳಿದರು.

ಚಿತ್ರಕ್ಕೆ ಎಂ.ಎಸ್. ತ್ಯಾಗರಾಜ್ ಸಂಗೀತ ನಿರ್ದೇಶನವಿದ್ದು, 6 ಹಾಡುಗಳಿವೆ. ಆರ್.ಪಿ.ರೆಡ್ಡಿ ಅವರ ಛಾಯಾಗ್ರಹಣವಿದೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.