ADVERTISEMENT

2022: ಮಗಳೊಂದಿಗೆ ಹೊಸ ವರ್ಷದ ಶುಭಾಶಯ ಕೋರಿದ ನಟಿ ಐಶ್ವರ್ಯ ರೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2022, 12:37 IST
Last Updated 1 ಜನವರಿ 2022, 12:37 IST
ಮಗಳು ಆರಾಧ್ಯ ಜೊತೆ ನಟಿ ಐಶ್ವರ್ಯ ರೈ
ಮಗಳು ಆರಾಧ್ಯ ಜೊತೆ ನಟಿ ಐಶ್ವರ್ಯ ರೈ   

ಬಾಲಿವುಡ್‌ ನಟಿ ಐಶ್ವರ್ಯರೈ ಅವರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಮಗಳು ಆರಾಧ್ಯಳ ಜೊತೆಗಿನ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ 2022ನೇ ವರ್ಷಕ್ಕೆ ಶುಭ ಹಾರೈಸಿದ್ದಾರೆ.

‘ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ಪ್ರೀತಿ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷವನ್ನು ದೇವರು ನಿಮಗೆ ಕರುಣಿಸಲಿ’ ಎಂದುಐಶ್ವರ್ಯತಿಳಿಸಿದ್ದಾರೆ.

ADVERTISEMENT

ಹೆಚ್ಚಿನ ಅಭಿಮಾನಿಗಳು ಐಶ್ವರ್ಯಅವರಿಗೆ ಹೊಸ ವರ್ಷಕ್ಕೆಶುಭಾಶಯ ಕೋರಿ ಕಾಮೆಂಟ್‌ ಮಾಡಿದ್ದಾರೆ.

‘ನಿಧಾನವಾಗಿ ಆರಾಧ್ಯ ಈ ಖಾತೆಯ ಮೇಲೆ ನಿಯಂತ್ರಣ ಹೊಂದುತ್ತಿದ್ದಾರೆ’ಎಂದು ವ್ಯಕ್ತಿಯೊಬ್ಬರು ಕಾಮೆಂಟಿಸಿದ್ದಾರೆ.

ಐಶ್ವರ್ಯಅವರು ಕೊನೆಯ ಬಾರಿಗೆ ಬೆಳ್ಳಿಪರದೆಯ ಮೇಲೆಕಾಣಿಸಿಕೊಂಡದ್ದು 2018ರಲ್ಲಿ.ಕಳೆದ ಹನ್ನೊಂದು ವರ್ಷಗಳಲ್ಲಿ, ಅವರು ಕೇವಲ ನಾಲ್ಕು ಚಿತ್ರಗಳನ್ನು ಮಾಡಿದ್ದಾರೆ.

ವಿಕ್ರಮ್, ಕಾರ್ತಿ ಮತ್ತು ಜಯಂ ರವಿ ನಟಿಸಿರುವ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕಐಶ್ವರ್ಯಈ ವರ್ಷ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.