ADVERTISEMENT

ರಾಜಮೌಳಿ ಕ್ಯಾಂಪ್‌ಗೆ ಅಜಯ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:00 IST
Last Updated 14 ಫೆಬ್ರುವರಿ 2019, 20:00 IST
   

‘ಬಾಹುಬಲಿ’ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘#RRR ಸೆಟ್‌ಗೆ ಮತ್ತೊಬ್ಬ ದಿಗ್ಗಜ ನಟ ಸೇರ್ಪಡೆಯಾಗಿದ್ದಾರೆ. ಅವರು ಬಾಲಿವುಡ್‌ನ ಎವರ್‌ಗ್ರೀನ್‌ ಹೀರೊ ಅಜಯ್‌ ದೇವಗನ್‌.

ರಾಜಮೌಳಿ– ಅಜಯ್‌ ಎರಡನೇ ಬಾರಿಗೆ ಒಟ್ಟಾಗುತ್ತಿದ್ದಾರೆ. 2012ರಲ್ಲಿ ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ ‘ಈಗ’ದ ಹಿಂದಿ ರೀಮೇಕ್‌ ‘ಮಕ್ಖಿ’ಯಲ್ಲಿ ಅಜಯ್‌ ದೇವಗನ್ ಡಬ್ಬಿಂಗ್‌ ಮಾಡಿದ್ದರು.

ರಾಜಮೌಳಿ, ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಸಹಭಾಗಿತ್ವದ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಅಜಯ್‌ ಸೇರ್ಪಡೆಯಿಂದ ಚಿತ್ರದ ತಾರಾಮೌಲ್ಯವೂ ಹೆಚ್ಚಿದಂತಾಗಿದೆ. #RRRನಲ್ಲಿ ಅಜಯ್‌ ಅವರದು ಅತಿಥಿ ಪಾತ್ರ. ಹಾಸ್ಯ ಸನ್ನಿವೇಶವೊಂದರಲ್ಲಿ ಅಜಯ್‌ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

#RRRಯ ಪ್ರತಿ ಸನ್ನಿವೇಶವನ್ನೂ ವಿಭಿನ್ನವಾಗಿ ಮತ್ತಷ್ಟೇ ಅದ್ದೂರಿಯಾಗಿ ಚಿತ್ರಿಸುವುದು ರಾಜಮೌಳಿ ಉದ್ದೇಶ. ಹೈದರಾಬಾದ್‌ನ ಸೆಟ್ಟೊಂದರಲ್ಲಿ ರಾಮ್‌ಚರಣ್‌ ಹೊಡೆದಾಟದ ದೃಶ್ಯ ಇದಕ್ಕೆ ಸಾಕ್ಷಿ. ಈ ದೃಶ್ಯದ ಹಿನ್ನೆಲೆಯಲ್ಲಿ ಬರೋಬ್ಬರಿ ಸಾವಿರ ಮಂದಿ ಹೊಡೆದಾಟದಲ್ಲಿ ನಿರತರಾಗಿರುವ ಸನ್ನಿವೇಶವನ್ನು ಸೃಷ್ಟಿಸಲಾಗಿದೆಯಂತೆ.

ಈ ಹಿಂದೆ, ಕಮಲ್‌ಹಾಸನ್‌ ಅವರ ‘ಇಂಡಿಯನ್‌ 2’ ನಲ್ಲಿ ಅಜಯ್‌ ಅವರಿಗೆ ಪ್ರಮುಖ ಪಾತ್ರವೊಂದನ್ನು ಆಫರ್ ಮಾಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು. ಆದರೆ ಬಹುಚರ್ಚಿತ#RRRಗೆ ಒಪ್ಪಿಗೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಅಜಯ್‌ ಈಗಾಗಲೇ ‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್‌’ ಚಿತ್ರೀಕರಣ ಮುಗಿಸಿದ ಬಳಿಕ ರಾಜಮೌಳಿ ಅವರ ಸೆಟ್‌ನಲ್ಲಿ ಕ್ಯಾಮೆರಾ ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.