ADVERTISEMENT

ಸುಕೇಶ್‌ ಶೆಟ್ಟಿ ನಿರ್ದೇಶನದ ‘ಪೀಟರ್‌’ ಸಿನಿಮಾಕ್ಕೆ ಅಜಯ್‌ ಗೋಗವಾಲೆ ದನಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 2:04 IST
Last Updated 14 ಮೇ 2025, 2:04 IST
   

ಸುಕೇಶ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಪೀಟರ್‌’ ಸಿನಿಮಾ ನಿರ್ಮಾಣ ಹಂತದಲ್ಲಿದೆ. ಈ ಸಿನಿಮಾದ ಹಾಡೊಂದಕ್ಕೆ ಖ್ಯಾತ ಗಾಯಕ ಅಜಯ್‌ ಗೋಗವಾಲೆ ದನಿಯಾಗಿದ್ದಾರೆ. ಇತ್ತೀಚೆಗೆ ಹಾಡಿನ ರೆಕಾರ್ಡಿಂಗ್‌ ನಡೆಯಿತು.

ಇತ್ತೀಚೆಗಷ್ಟೇ ಮಲಯಾಳ ಗಾಯಕ ಪ್ರಣವಂ ಸಸಿಯಿಂದ ಚಿತ್ರದ ಹಾಡೊಂದನ್ನು ಹಾಡಿಸಿದ್ದ ಚಿತ್ರತಂಡವೀಗ ಮತ್ತೊಂದು ಹಾಡಿಗೆ ಬಾಲಿವುಡ್ ಗಾಯಕನನ್ನು ಕರೆಸಿದೆ. ಬಾಲಿವುಡ್‌ ಹಾಗೂ ಮರಾಠಿಯ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ದನಿ ನೀಡಿರುವ ಅಜಯ್‌ ಇದೀಗ ಕನ್ನಡದ ಹಾಡೊಂದನ್ನು ಹಾಡಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನವಿದೆ.

ಮಡಿಕೇರಿಯ ಸುತ್ತಲ ವಾತಾವರಣದಲ್ಲಿ ನಡೆಯುವ ಸಸ್ಪೆನ್ಸ್ ಡ್ರಾಮಾ ಕಥಾಹಂದರವನ್ನು ‘ಪೀಟರ್’ ಹೊಂದಿದೆ. ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ನಟಿಸಿದ್ದಾರೆ. ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಚಿತ್ರಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.