ADVERTISEMENT

‘ಅಲಾ ವೈಕುಂಠಪುರಮುಲೋ’ ತಮಿಳಿಗೆ; ನಾಯಕನಾಗಿ ಶಿವಕಾರ್ತಿಕೇಯನ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 9:00 IST
Last Updated 17 ಏಪ್ರಿಲ್ 2020, 9:00 IST
ಶಿವಕಾರ್ತಿಕೇಯನ್‌ ಕಾಲಿವುಡ್‌
ಶಿವಕಾರ್ತಿಕೇಯನ್‌ ಕಾಲಿವುಡ್‌   

ಅಲ್ಲು ಅರ್ಜುನ್‌ ನಾಯಕನಟನಾಗಿ ನಟಿಸಿರುವ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾ ‘ಅಲಾ ವೈಕುಂಠಪುರಮುಲೋ’ ಈಗ ತಮಿಳಿಗೆ ರಿಮೇಕ್ ಆಗುತ್ತಿದೆ. ಸಿನಿಮಾ ತಯಾರಿಗೆ ಬೇಕಾದ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಇದರಲ್ಲಿ ನಟ ಶಿವಕಾರ್ತಿಕೇಯನ್‌ ನಾಯಕನಾಗಿ ನಟಿಸಲಿದ್ದಾರೆ.

ಜನವರಿ 12ರಂದು ಬಿಡುಗಡೆಯಾಗಿರುವ ‘ಅಲಾ ವೈಕುಂಠಪುರಮುಲೋ’ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ವೀಕ್ಷಿಸಿದ ಶಿವಕಾರ್ತಿಕೇಯನ್‌, ಇದನ್ನು ತಮಿಳಿನಲ್ಲಿ ರಿಮೇಕ್‌ ಮಾಡಲು ಉತ್ಸಾಹ ತೋರಿದ್ದಾರೆ. ಅವರು ಚಿತ್ರದ ರಿಮೇಕ್‌ ಹಕ್ಕನ್ನು ಪಡೆದುಕೊಂಡು ತನ್ನದೇ ಎಸ್‌.ಕೆ ಪ್ರೊಡಕ್ಷನ್ಸ್‌ ಅಡಿಯಲ್ಲಿ ಚಿತ್ರ ನಿರ್ಮಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ.ಈ ಹಿಂದೆ ನಟರಾದ ಧ್ರುವ ವಿಕ್ರಮ್‌ ಹಾಗೂ ಜಯಂ ರವಿ ಸಹ ಈ ಚಿತ್ರವನ್ನು ತಮಿಳಿನಲ್ಲಿ ರಿಮೇಕ್‌‌ ಮಾಡಲು ಆಸಕ್ತಿ ತೋರಿಸಿದ್ದರು.

‘ಅಲಾ ವೈಕುಂಠಪುರಮುಲೋ’ ಚಿತ್ರದಲ್ಲಿ ಪೂಜಾ ಹೆಗ್ಡೆ, ನಿವೇತಾ ಪೋತುರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ‘ಬುಟ್ಟ ಬೊಮ್ಮ’ ಹಾಡು ಭಾರಿ ಜನಪ್ರಿಯತೆ ಗಳಿಸಿದ್ದು, ಆ ಹಾಡನ್ನು ಯೂಟ್ಯೂಬ್‌ನಲ್ಲಿ ಇಲ್ಲಿಯವರೆಗೂ 10 ಕೋಟಿಗಿಂತಲೂ ಅಧಿಕ ಮಂದಿವೀಕ್ಷಿಸಿದ್ದಾರೆ.

ADVERTISEMENT

ಶಿವಕಾರ್ತಿಕೇಯನ್‌ ಅಭಿನಯದ ವೈಜ್ಞಾನಿಕ ಕತೆಯಧಾರಿತ ‘ಆಯಲಾನ್’ (Ayalaan)‌ ಸಿನಿಮಾವು ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ‘ಡಾಕ್ಟರ್‌’ ಎಂಬ ಸಿನಿಮಾದಲ್ಲೂ ಶಿವಕಾರ್ತಿಕೇಯನ್‌ ನಟಿಸಿದ್ದು., ಇದನ್ನು ನೆಲ್ಸನ್‌ ದಿಲೀಪ್‌ಕುಮಾರ್‌ ನಿರ್ದೇಶಿಸಿದ್ದು, ಪ್ರಿಯಾಂಕ ಅರುಲ್‌ ಮೋಹನ್‌ ಎಂಬ ಹೊಸ ಮುಖ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.