ADVERTISEMENT

ಸ್ವಿಸ್‌ನಲ್ಲಿ ಫ್ಯಾಮಿಲಿ ಜತೆ ಅಲ್ಲು ಅರ್ಜುನ್

ಕುಟುಂಬದೊಂದಿಗೆ ರಜೆ ಕಳೆದ ಅಲ್ಲು ಅರ್ಜುನ್

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:30 IST
Last Updated 15 ಮೇ 2019, 19:30 IST
ಸ್ವಿಸ್‌ನಲ್ಲಿ ಅಲ್ಲು ಅರ್ಜುನ್ ಕುಟುಂಬ
ಸ್ವಿಸ್‌ನಲ್ಲಿ ಅಲ್ಲು ಅರ್ಜುನ್ ಕುಟುಂಬ   

ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಯುವಜನರ ನೆಚ್ಚಿನ ಹೀರೊ. ಅಲ್ಲು ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯಗಳಿಗೆ ವಿಶೇಷ ಸ್ಥಾನವಿದೆ. ಅಂತೆಯೇ ಈ ಹೀರೊ ನಿಜ ಜೀವನದಲ್ಲೂ ಕುಟುಂಬಕ್ಕೆ ಆದ್ಯತೆ ನೀಡುವಲ್ಲಿ ಮುಂದಿದ್ದಾರೆ.

ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಅರ್ಜುನ್ ತುಸು ಬಿಡುವು ಮಾಡಿಕೊಂಡು ಹೆಂಡತಿ ಸ್ನೇಹಾ ರೆಡ್ಡಿ ಮತ್ತು ಮಕ್ಕಳ ಜತೆ ಸ್ವಿಟ್ಜರ್‌ಲೆಂಡ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದಾರೆ. ಅಲ್ಲು ಕುಟುಂಬದ ಜತೆ ಈ ರೀತಿ ಕಾಲ ಕಳೆಯುತ್ತಿರುವುದು ಇದೇ ಮೊದಲಲ್ಲ. ತಮ್ಮ ಕುಟುಂಬದಲ್ಲಿ ಯಾವುದೇ ಮದುವೆಯಿರಲಿ, ಬರ್ತ್‌ಡೇ ಪಾರ್ಟಿಯಿರಲಿ ಅಲ್ಲೆಲ್ಲಾ ಅರ್ಜುನ್ ತಪ್ಪದೇ ಹಾಜರಾತಿ ಇದ್ದೇ ಇರುತ್ತದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರಕ್ಕೆ ಆಯ್ಕೆಯಾಗಿರುವ ಅರ್ಜುನ್ ಚಿತ್ರೀಕರಣ ಪ್ರಾರಂಭಕ್ಕೆ ಮುನ್ನವೇ ಹೆಂಡತಿ, ಮಕ್ಕಳೊಂದಿಗೆ ರಜೆ ಕಳೆದಿದ್ದಾರೆ. ರಜೆಯ ಮಜದಲ್ಲಿ ತೆಗೆದಿರುವ ಚಿತ್ರಗಳನ್ನು ಅಲ್ಲು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.