ಅಲ್ಲು ಅರ್ಜುನ್
ಬೆಂಗಳೂರು: ಸೆಲಿಬ್ರಿಟಿ ನಟ–ನಟಿಯರು ಅಭಿಮಾನಿಗಳಿಂದ ಸಾರ್ವಜನಿಕವಾಗಿ ತಪ್ಪಿಸಿಕೊಳ್ಳಲು ಆಗಾಗ ಪಡಿಪಾಟಲು ಪಡುವುದುಂಟು. ಹೀಗೆ ಮಾಡುವಾಗ ಅವರು ವೈಯಕ್ತಿಕವಾಗಿಯೂ ತೊಂದರೆ ಅನುಭವಿಸುತ್ತಾರೆ.
ಇಂತಹದ್ದೇ ಘಟನೆ ನಟ ಪುಷ್ಪ ಸಿನಿಮಾ ಖ್ಯಾತಿಯ ಅಲ್ಲು ಅರ್ಜುನ್ ಅವರಿಗೂ ಎದುರಾಗಿದೆ.
ಇತ್ತೀಚೆಗೆ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ತೆರಳಿದ್ದ ಅಲ್ಲು ಅರ್ಜುನ್, ವಾಪಸ್ ಹೈದರಾಬಾದ್‌ಗೆ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಿಂದ ಮುಜುಗರ ಅನುಭವಿಸಿದರು.
ಅಭಿಮಾನಿಗಳಿಂದ ಮರೆಮಾಚಿಕೊಳ್ಳಲು ಅಲ್ಲು ಕೂಲಿಂಗ್ ಗ್ಲಾಸ್ ಹಾಗೂ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು. ಈ ವೇಳೆ ತಪಾಸಣೆ ವೇಳೆ ಅಲ್ಲು ಅರ್ಜುನ್ ಅವರನ್ನು ಭದ್ರತಾ ಸಿಬ್ಬಂದಿಯೊಬ್ಬರು ಗುರುತಿಸಲಿಲ್ಲ. ಹೀಗಾಗಿ ಅಲ್ಲು ಸಹಾಯಕರಿಗೆ ಅವರಿಗೆ ಮಾಸ್ಕ್ ಹಾಗೂ ಕೂಲಿಂಗ್ ಗ್ಲಾಸ್ ತೆಗೆಯಲು ಹೇಳಿ ಎಂದರು. ಆಗ ಅಲ್ಲು ಅರ್ಜುನ್ ಗ್ಲಾಸ್ ಹಾಗೂ ಮಾಸ್ಕ್ ತೆಗೆದು ತಪಾಸಣೆಗೆ ಒಳಗಾದರು.
ಬಳಿಕ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ತೆರಳಲು ಅವಕಾಶ ಮಾಡಿ ಕೊಟ್ಟರು. ಇದಕ್ಕೆ ಸಂಬಂಧಿಸಿದ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ್ದು ಯಾರೇ ಆಗಲಿ ನಿಯಮಗಳನ್ನು ಪಾಲಿಸಬೇಕು ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.