ADVERTISEMENT

ರಕ್ತದಲ್ಲೇ ಬರೆಯುವ ಕಥೆ ವಿಜಯ್‌ ನಿರ್ದೇಶನದ ‘ಆಲ್ಫಾ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:39 IST
Last Updated 20 ಜನವರಿ 2026, 23:39 IST
ಗೋಪಿಕಾ, ಹೇಮಂತ್‌, ಅಯಾನ 
ಗೋಪಿಕಾ, ಹೇಮಂತ್‌, ಅಯಾನ    

‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಿರ್ದೇಶನದ ಹೊಸ ಸಿನಿಮಾ ‘ಆಲ್ಫಾ’ ಫೆ.20ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ರಿಲೀಸ್‌ ಆಗಿದೆ. 

‘ಮೆನ್‌ ಲವ್‌ ವೆಂಜೆಂನ್ಸ್‌’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಎಲ್‌.ಎ.ಪ್ರೊಡಕ್ಷನ್ಸ್‌ನಡಿ ಆನಂದ್‌ ಕುಮಾರ್‌ ನಿರ್ಮಿಸಿದ್ದು, ನಾಯಕನಾಗಿ ಹೇಮಂತ್‌ ಕುಮಾರ್‌ ನಟಿಸಿದ್ದಾರೆ. ಇವರಿಗೆ ಅಯಾನಾ ಹಾಗೂ ಗೋಪಿಕಾ ಸುರೇಶ್ ಜೋಡಿಯಾಗಿದ್ದಾರೆ. ಟೈಟಲ್‌ ಟ್ರ್ಯಾಕ್‌ಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ ಶರ್ಮ ಸಾಹಿತ್ಯವಿದೆ. ವ್ಯಾಸರಾಜ ಸೋಸಲೆ ಹಾಡಿರುವ ಶೀರ್ಷಿಕೆ ಗೀತೆಯು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ನಾಯಕನ ಪಾತ್ರದ ಗುಣಲಕ್ಷಣಗಳನ್ನು ಹಾಡಿನ ಮೂಲಕ ವಿವರಿಸಿದ್ದಾರೆ ನಿರ್ದೇಶಕರು. ರಕ್ತದಲ್ಲೇ ಬರೆಯುವ ಕಥೆ ಇದಾಗಿದೆ ಎಂದು ‘ಆಲ್ಫಾ’ದ ಕಥಾಹಂದರದ ಸಣ್ಣ ಸುಳಿವನ್ನೂ ನೀಡಲಾಗಿದೆ. 

‘ನಾನು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದವನು. ಆದರೆ ನಟನಾಗಬೇಕು ಎಂಬ ಕನಸು ಮೊದಲಿನಿಂದಲೇ ಇತ್ತು. ನಾಯಕನಾಗಲು ಬೇಕಾದ ಎಲ್ಲಾ ತರಬೇತಿ ಪಡೆದು ಇಲ್ಲಿಗೆ ಬಂದಿದ್ದೇನೆ. ನನ್ನ ಚೊಚ್ಚಲ ಸಿನಿಮಾಗೆ ಪ್ರೇಕ್ಷಕರ ಪ್ರೋತ್ಸಾಹ ಬೇಕಾಗಿದೆ’ ಎಂದರು ಹೇಮಂತ್ ಕುಮಾರ್.

ADVERTISEMENT

ಸಿನಿಮಾದಲ್ಲಿ ‘ಬಿಗ್‌ಬಾಸ್‌’ ಖ್ಯಾತಿಯ ಕಾರ್ತಿಕ್‌ ಮಹೇಶ್‌ ಖಳನಾಯಕನಾಗಿ ನಟಿಸಿದ್ದು, ಹಿಂದೆಂದೂ ಕಾಣಿಸಿಕೊಳ್ಳದ ಭಿನ್ನವಾದ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಎಂದಿದೆ ಚಿತ್ರತಂಡ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.