ADVERTISEMENT

‘ಬಾಹುಬಲಿ’ ಪ್ರಭಾಸ್‌ರನ್ನು ಹಾಡಿ ಹೊಗಳಿದ ಬಿಗ್‌ ಬಿ ಅಮಿತಾಭ್: ಕಾರಣ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2022, 11:25 IST
Last Updated 21 ಫೆಬ್ರುವರಿ 2022, 11:25 IST
ಅಮಿತಾಬ್ ಬಚ್ಚನ್ ಹಾಗೂ ಪ್ರಭಾಸ್
ಅಮಿತಾಬ್ ಬಚ್ಚನ್ ಹಾಗೂ ಪ್ರಭಾಸ್   

ಬೆಂಗಳೂರು: ಇನ್ನೂ ಹೆಸರಿಡದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಅಮಿತಾಭ್ ಬಚ್ಚನ್ ಹಾಗೂ ಬಾಹುಬಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ.

ಪ್ರೊಜೆಕ್ಟ್ ಕೆ ಎಂಬ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಚಿತ್ರೀಕರಣದ ಬಿಡುವಿನಲ್ಲಿ ನಡೆದ ಸಂಗತಿ ಬಗ್ಗೆ ಅಮಿತಾಭ್ ಚಚ್ಚನ್ ಅವರು ಪ್ರಭಾಸ್ ಔದಾರ್ಯದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಶೂಟಿಂಗ್ ಸಂದರ್ಭದಲ್ಲಿ ಪ್ರಭಾಸ್, ಬಿಗ್‌ ಬಿಗಾಗಿ ತಾವೇ ತಮ್ಮ ಕೈಯಾರೇ ತಯಾರಿಸಿದ ಅಡುಗೆ ಹಾಗೂ ಕೆಲವೊಂದಿಷ್ಟು ಕುಕೀಸ್‌ಗಳನ್ನು ತಂದು ಕೊಟ್ಟಿದ್ದರು. ಇದರ ಬಗ್ಗೆ ಬಿಗ್‌ ಬಿ ಸಂತುಷ್ಟಗೊಂಡು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಡಿಯರ್ ಪ್ರಭಾಸ್ ನೀನು ನನಗೋಸ್ಕರ ಮನೆಯಿಂದ ನೀನೇ ಮಾಡಿದ ಅಡುಗೆ ತಂದೆ. ಅದರ ರುಚಿ ಹಾಗೂ ನಿನ್ನ ಔದಾರ್ಯವನ್ನು ಅಳತೆ ಮಾಡಲು ಆಗುವುದಿಲ್ಲ. ಅದರ ಪ್ರಮಾಣವನ್ನೂ ಅಳತೆ ಮಾಡಲೂ ಆಗುವುದಿಲ್ಲ. ಒಂದು ಇಡೀ ಸೈನ್ಯಕ್ಕೇ ಅದನ್ನು ನೀಡಬಹುದಿತ್ತು. ಅದರಲ್ಲೂ ರುಚಿಕರವಾದ ಕುಕೀಸ್‌ಗಳೂ ಅದ್ಭುತ! ಏನೇ ಆಗಲಿ ನಿನ್ನ ಹೊಗಳಿಕೆಯನ್ನೂ ನನಗೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ’ ಎಂದು ಹಾಡಿ ಹೊಗಳಿದ್ದಾರೆ.

ನಾಗ್ ಅಶ್ವಿನ್ನಿರ್ದೇಶನದ ‍ಪ್ರೊಜೆಕ್ಟ್ ಕೆ ಬಹುಭಾಷಾ ಸಿನಿಮಾವಾಗಿದ್ದು, ದೀಪಿಕಾ ಪಡುಕೋಣೆ ಕೂಡ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ.

ಇನ್ನು, ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ ಇದೇ ಮಾರ್ಚ್ 11 ರಂದು ತೆರೆಗೆ ಅಪ್ಪಳಿಸಲಿದೆ. ಉಳಿದಂತೆ ‘ಸಲಾರ್’, ‘ಸ್ಫಿರಿಟ್’, ‘ಆಧಿಪುರುಷ್’ ಸಿನಿಮಾಗಳಲ್ಲಿ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.