ADVERTISEMENT

ಭರವಸೆ ಮೂಡಿಸುವ ಆ್ಯಂಡ್ರಾಯಿಡ್‌ ಕುಂಜಪ್ಪನ್‌ ವರ್ಷನ್‌ 5.25 ಟ್ರೇಲರ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 6:26 IST
Last Updated 30 ಅಕ್ಟೋಬರ್ 2019, 6:26 IST
ಆ್ಯಂಡ್ರಾಯಿಡ್‌ ಕುಂಜಪ್ಪನ್‌ ವರ್ಷನ್‌ 5.25’
ಆ್ಯಂಡ್ರಾಯಿಡ್‌ ಕುಂಜಪ್ಪನ್‌ ವರ್ಷನ್‌ 5.25’   

ಸೂರಜ್‌ ವೆಂಜರಮೂಡು ಹಾಗೂ ಸೌಬಿನ್‌ ಶಹಿರ್‌ ಅಪ್ಪ–ಮಗನಾಗಿ ಕಾಣಿಸಿಕೊಂಡಿರುವ ಮಲಯಾಳಂ ಸಿನಿಮಾ ‘ಆ್ಯಂಡ್ರಾಯಿಡ್‌ ಕುಂಜಪ್ಪನ್‌ ವರ್ಷನ್‌ 5.25’ ಟ್ರೇಲರ್‌ ನಗಿಸುವಲ್ಲಿ ಸಫಲವಾಗಿದೆ.

ಮೋಹನ್‌ ಲಾಲ್‌ ಮತ್ತು ಪೃಥ್ವಿರಾಜ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದರು.

ಆಧುನಿಕ ತಂತ್ರಜ್ಞಾನವನ್ನು ಧಿಕ್ಕರಿಸಿ ಬದುವ ಅಪ್ಪನಿಗೆ, ಸದಾ ಅವುಗಳ ಬಗ್ಗೆಯೇ ಚಿಂತಿಸುವ ಮಗ. ಮಿಕ್ಸರ್‌ ಅನ್ನೇ ಬಳಸದ ಅಪ್ಪನಿಗೆ ಮಗ ರೋಬೋಟ್‌ ತಂದು ಕೊಟ್ಟರೆ ಆಗುವ ಪಜೀತಿಗಳನ್ನು ಈ ಟ್ರೇಲರ್‌ ಚಿತ್ರಿಸುತ್ತದೆ.

ADVERTISEMENT

ಅಪ್ಪ ಮಗನ ಸುತ್ತಲೇ ಸುತ್ತುವ ಈ ಕಥೆಯನ್ನು ಹಾಸ್ಯಭರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕ ರತೀಶ್‌ ಬಾಲಕೃಷ್ಣನ್‌ ಮಾಡಿದ್ದಾರೆ. ಟ್ರೇಲರ್‌ ಅನ್ನು ಈಗಾಗಲೇ ಸಾಕಷ್ಟು ಮಂದಿ ವೀಕ್ಷಿಸಿದ್ದು, 41 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

ಈ ಸಿನಿಮಾವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.