ADVERTISEMENT

‘ಅಂಗೈಲಿ ಅಕ್ಷರ’ ಚಿತ್ರ ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 8:13 IST
Last Updated 5 ಜುಲೈ 2022, 8:13 IST
‘ಅಂಗೈಲಿ ಅಕ್ಷರ’ ಚಿತ್ರದ ದೃಶ್ಯ
‘ಅಂಗೈಲಿ ಅಕ್ಷರ’ ಚಿತ್ರದ ದೃಶ್ಯ   

ಕೆ.ಎಚ್.ಎಸ್. ಬ್ಯಾನರ್ ಅಡಿಯಲ್ಲಿ ಜ್ಞಾನೇಶ ಎಂ.ಬಿ. ಗೋರೂರು ಅವರು ನಿರ್ಮಿಸಿರುವ ಚಿತ್ರ ‘ಅಂಗೈಲಿ ಅಕ್ಷರ’. ತಾಯಿಯಿಂದ ದೂರಾದ ಬಡ ಕುಟುಂಬದ ಹುಡುಗನ ಶಿಕ್ಷಣದ ಹಾದಿ, ತಾಯಿ ಮಗನ ನಡುವಿನ ಬಾಂಧವ್ಯದ ಕಥೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೇಳುವ ಈ ಚಿತ್ರ ‌ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಕ್ಕಾ ಫ್ಯಾಮಿಲಿ, ಫ್ರೆಂಡ್‍ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿ ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಕ್ಯಾಬ್ ಡ್ರೈವರ್ ಆದ ಸಿದ್ಧರಾಜು ಎಚ್. ಕಾಳೇನಹಳ್ಳಿ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

‘ಬಾಲ್ಯದಲ್ಲೇ ತಂದೆ ತಾಯಿ ಕಳೆದುಕೊಂಡ ಮಕ್ಕಳು‌ ತಮ್ಮ ವಿದ್ಯಾಭ್ಯಾಸದ ಜೊತೆಗೆ ಹೇಗೆ ಜೀವನ ರೂಪಿಸಿಕೊಳ್ಳಬೇಕು ಎಂಬುದನ್ನು ಹೇಳುವ ಚಿತ್ರವಿದು. ಎಲ್ಲಾ ತಂದೆ ತಾಯಂದಿರು ಮಕ್ಕಳಿಗೆ ತೋರಿಸಬೇಕಾದ, ಪ್ರತಿಯೊಬ್ಬ ವಿದ್ಯಾರ್ಥಿಯೂ ನೋಡಬೇಕಾದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಈ ಚಿತ್ರವಿದು’ ಎಂದಿದೆ ಚಿತ್ರತಂಡ.

ಹುಲಿಯೂರು ದುರ್ಗ, ಮಾಗಡಿ, ತಾವರೆಕೆರೆ, ದೊಡ್ಡಬಳ್ಳಾಪುರ, ಘಾಟಿ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ನಾಗೇಶ್ ಉಜ್ಜನಿ, ವೀ ಶ್ರೀ, ಮಲ್ಲಿಕಾರ್ಜುನ್ ಅವರ ಸಹ ನಿರ್ದೇಶನ, ಎ.ಟಿ.ರವೀಶ್ ಸಂಗೀತ ಸಂಯೋಜನೆ, ರಮೇಶ್-ನರಸಿಂಹ ಛಾಯಾಗ್ರಹಣವಿದೆ.

ADVERTISEMENT

ಸಂಜೀವ್ ರೆಡ್ಡಿ ಸಂಕಲನ, ಲಯನ್ ಗಂಗರಾಜು ಸಾಹಸ, ಸ್ಟಾರ್ ನಾಗಿ, ಸುರೇಶ್ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಬಾಲನಟರಾಗಿ ಕನ್ನಡ ಕೋಗಿಲೆಯ ತನುಷರಾಜ್, ‘ಶನಿ’ ಧಾರಾವಾಹಿಯ ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಪುಟಾಣಿ ಪಂಟ್ರು ಮಧುಸೂದನ್, ಬೇಬಿ ಅಂಕಿತ ಜಯರಾಮ್, ತನುಶ್ರೀ, ಬೇಬಿಶ್ರೀ ಹಾಗೂ ಜೀವನ್ ಗೌಡ, ಚೇತನ್, ಚಂದನ್ ಹಾಗೂ ಮಾಸ್ಟರ್ ನವನೀತ್, ಮಧುಸೂದನ್ ಅಲ್ಲದೆ ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕಾ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಬಾ.ನಾ. ರವಿ, ಗಂಗರಾಜು, ನಾಗಶ್ರೀ, ಗುರು, ರಾಜು, ಬಸವರಾಜು, ಪ್ರತಾಪ್, ಪ್ರಶಾಂತ್ ಚಕ್ರವರ್ತಿ ಜೊತೆಗೆ ಶಿಕ್ಷಣ ಸಚಿವರಾಗಿ ಮಹೇಂದ್ರ ಮುಣ್ಣೋತ್ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.