ADVERTISEMENT

ಅನುಷ್ಕಾ ಶರ್ಮಾ ಮತ್ತು ಬಾಲ್ಕನಿ ಗೆಳೆಯರು !

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 11:15 IST
Last Updated 18 ಜೂನ್ 2020, 11:15 IST
ಹೋಂ ಗಾರ್ಡನಿಂಗ್‌ನಲ್ಲಿ ಅನುಷ್ಕಾ
ಹೋಂ ಗಾರ್ಡನಿಂಗ್‌ನಲ್ಲಿ ಅನುಷ್ಕಾ   

ಬಾಲಿವುಡ್‌ ನಟಿಅನುಷ್ಕಾ ಶರ್ಮ ತಮ್ಮ ಬಾಲ್ಕನಿ ಗೆಳೆಯರೊಂದಿಗೆ ಕಳೆದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅರೆ, ಯಾರಿದು ಬಾಲ್ಕನಿ ಗೆಳೆಯರು ಎಂದು ಯೋಚಿಸಬೇಡಿ. ಮನೆಯ ಮಹಡಿ ಹಾಗೂ ಬಾಲ್ಕನಿಯಲ್ಲಿ ಪುಟ್ಟ ತೋಟ ಮಾಡಿರುವ ಅನುಷ್ಕಾ, ಆ ತೋಟದಲ್ಲಿರುವ ಗಿಡಗಳನ್ನು 'ನನ್ನ ಗೆಳೆಯರು' ಎಂದು ಕರೆದಿದ್ದಾರೆ.

ಬಾಲ್ಕನಿಯಲ್ಲಿ ರಬ್ಬರ್, ಮನಿಪ್ಲಾಂಟ್ ಸೇರಿ ಅನೇಕ ಗಿಡಗಳನ್ನು ಬೆಳದಿರುವ ಅನುಷ್ಕಾ ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಗಿಡಗಳೊಂದಿಗೆ ಅನುಷ್ಕಾ ಒಡನಾಡುತ್ತಿರುವ ಫೋಟೊವನ್ನು ಪತಿ ವಿರಾಟ್‌ ಕೊಹ್ಲಿ ಕ್ಲಿಕಿಸಿದ್ದಾರೆ. ಈ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅನುಷ್ಕಾ ’ನಾನು ಮತ್ತು ನನ್ನ ಗೆಳೆಯರು‘ ಎಂದು ಶೀರ್ಷಿಕೆ ಬರೆದಿದ್ದಾರೆ.

ಮುಂಜಾನೆ ವರ್ಕೌಟ್‌ ನಂತರವೂ ಈ ಗಿಡಗಳೊಂದಿಗೆಸಮಯ ಕಳೆಯುತ್ತಿದ್ದಾರೆಅನುಷ್ಕಾ. ಅಪ್ಪನೊಡನೆ ಸೇರಿ ಈ ಕೈ ತೋಟ ಮಾಡಿದ್ದಾರೆ.

ADVERTISEMENT

ಲಾಕ್‌ಡೌನ್‌ ಸಮಯವಾದ್ದರಿಂದ ಸದ್ಯ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಇವರ ನಿರ್ಮಾಣ ಸಂಸ್ಥೆಯ ಕೆಲಸಗಳು ನಡೆಯುತ್ತಿವೆ ಅಷ್ಟೆ.ಅಮೆಜಾನ್‌ ಪ್ರೈಂನಲ್ಲಿರುವ ’ಪಾತಾಳ್ ಲೋಕ್‌‘ ಸರಣಿ ಯಶಸ್ಸು ಕಂಡಿದೆ.

ಈ ಕುರಿತು ಸಂದರ್ಶವೊಂದರಲ್ಲಿ ಮಾತನಾಡಿದ ಅವರು ’ನನಗಾಗಿ ಸಿನಿಮಾ ಮಾಡಲುಈ ನಿರ್ಮಾಣ ಸಂಸ್ಥೆ ಮಾಡಿಲ್ಲ. ಸದಭಿರುಚಿಯ ಸಿನಿಮಾ ಮಾಡಬೇಕು ಎಂಬ ಆಲೋಚನೆಯಿದೆ. ಮಹಿಳಾ ಕೇಂದ್ರೀತ ಕತೆಗಳ ಸಿನಿಮಾ ನಿರ್ಮಾಣ ಮಾಡುವ ಕನಸಿದೆ‘ ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.