ರಶ್ಮಿತ ಆರ್. ಗೌಡ
ಗ್ರಾಮೀಣ ಸೊಗಡಿನ ಹಾಸ್ಯಮಯ ಕಥಾಹಂದರ ಹೊಂದಿರುವ ‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಯುವ ರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಜೆ.ವಿ.ಆರ್ ದೀಪು ನಿರ್ದೇಶನದ ಚಿತ್ರವಿದು.‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್ ಹಿರೇಮಠಗೆ ರಶ್ಮಿತ ಆರ್. ಗೌಡ ಜೋಡಿಯಾಗಿದ್ದಾರೆ.
‘ಲೂಸಿಯಾ ಪವನ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಜನಮೆಚ್ಚಿಗೆ ಗಳಿಸಿವೆ. ಸೆಪ್ಟೆಂಬರ್ 19ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
‘ನಾನು ಜನರಿಗೆ ಪರಿಚಯವಾಗಿದ್ದೆ ಪುನೀತ್ ರಾಜಕುಮಾರ್ ನಿರ್ಮಾಣದ ‘ಫ್ರೆಂಚ್ ಬಿರಿಯಾನಿ’ ಚಿತ್ರದ ಮೂಲಕ. ಅವರ ಕುಟುಂಬದ ಯುವ ರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಇದೊಂದು ಹಾಸ್ಯಮಯ ಕಥೆ ಆಧಾರಿತ ಚಿತ್ರ’ ಎಂದರು ಮಹಾಂತೇಶ್ ಹಿರೇಮಠ.
ರಾಜೇಶ್ ಗೌಡ ಬಂಡವಾಳ ಹೂಡಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಚಿತ್ರಗ್ರಹಣ, ಪ್ರವೀಣ್ -ಪ್ರದೀಪ್ ಸಂಗೀತ, ಸುನೀಲ್ ಕಶ್ಯಪ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.