ಆಶೀಸ್ ಚಂಚಲಾನಿ, ಎಲ್ಲಿ ಅವ್‌ರಾಮ್
ಬೆಂಗಳೂರು: ಭಾರತದ ಖ್ಯಾತ ಯೂಟ್ಯೂಬರ್ ಆಶೀಸ್ ಚಂಚಲಾನಿ ಅವರು ಸ್ವಿಡನ್ ಮೂಲದ ಬಾಲಿವುಡ್ ನಟಿ ಎಲ್ಲಿ ಅವ್‌ರಾಮ್ (Elli AvRam) ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಆಶೀಸ್ ಚಂಚಲಾನಿ ಎಲ್ಲಿ ಅವರನ್ನು ಎತ್ತಿಕೊಂಡಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ‘ಫೈನಲಿ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ನಟಿಯೊಂದಿಗೆ ಎಂಗೇಜ್ ಆಗಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಆಶೀಸ್ ಚಂಚಲಾನಿ ಅವರಿಗೆ 30 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳು ಯೂಟ್ಯೂಬ್‌ನಲ್ಲಿ 17 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳು ಇನ್‌ಸ್ಟಾದಲ್ಲಿದ್ದಾರೆ. ಫೇಸ್‌ಬುಕ್, ಎಕ್ಸ್‌ನಲ್ಲೂ ಅವರು ಜನಪ್ರಿಯ.
ಮುಂಬೈ ಮೂಲದ ಅವರು ಭಾರತದ ಪ್ರಮುಖ ಕಂಟೆಂಟ್ ಕ್ರಿಯೇಟರ್ ಎಂದು ಹೆಸರುವಾಸಿಯಾಗಿದ್ದಾರೆ.
ಎಲ್ಲಿ ಅವ್‌ರಾಮ್ ಅವರು ಬಾಲಿವುಡ್ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾಡೆಲಿಂಗ್‌ನಲ್ಲೂ ಜನಪ್ರಿಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.