ADVERTISEMENT

ಪಯಣದಲ್ಲಿ ಸಾಗುವ ‘ಅಸ್ಥಿರ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 10:45 IST
Last Updated 13 ಸೆಪ್ಟೆಂಬರ್ 2022, 10:45 IST
ಅನಿಲ್‌ ಸಿ.ಆರ್‌., ಕಾವೇರಿ
ಅನಿಲ್‌ ಸಿ.ಆರ್‌., ಕಾವೇರಿ   

ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗ ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಿದೆ ‘ಅಸ್ಥಿರ’. ತ್ರಿಕೋನ ಪ್ರೇಮ ಕಥೆಯು ಬನ್ನೂರುನಿಂದ ಕುಮಟಾ, ಹೊನ್ನಾವರ ತನಕ ಪಯಣದಲ್ಲಿ ಸಾಗಿ ಕಾಡಿನಲ್ಲಿ ಕೊನೆಗೊಳ್ಳುವುದನ್ನು ಥ್ರಿಲ್ಲರ್, ಸಸ್ಪೆನ್ಸ್ ಮಾದರಿಯಲ್ಲಿ ತೋರಿಸಲಾಗಿದೆ. ಚಿತ್ರದ ಎರಡು ಲಿರಿಕಲ್‌ ಹಾಡುಗಳು ಬಿಡುಗಡೆಯಾಗಿವೆ.

ಪ್ರಮೋದ್ ಎಸ್.ಆರ್. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೊಬ್ಬ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅನಿಲ್‌ ಸಿ.ಆರ್. ಕಥೆ ಮತ್ತು ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಹೆಸರಿನಲ್ಲಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಕಾಲೇಜು ಹುಡುಗಿಯಾಗಿ ಕಾವೇರಿ ನಾಯಕಿ. ಗೆಳತಿಯರಾಗಿ ಹುಬ್ಬಳಿ ಮೂಲದ ಭುವನ, ಗುಬ್ಬಿ ಕಡೆಯ ಹರಿಣಿ ಮುಂತಾದವರು ನಟಿಸಿದ್ದಾರೆ. ಕಲಾವಿದರ ಮೂಲ ಹೆಸರನ್ನು ಆಯಾ ಪಾತ್ರಕ್ಕೆ ಬಳಸಲಾಗಿದೆ.

ಸಿದ್ದು ಅರಸು ಸಾಹಿತ್ಯದ ನಾಲ್ಕು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್ ಆರ್., ಸಂಕಲನ ಅಯುರ್‌ಸ್ವಾಮಿ, ಸಾಹಸ ಗಣೇಶ್ ಅವರದ್ದು. ಕುಮಟ, ಹೊನ್ನಾವರ, ಬನ್ನೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನವೆಂಬರ್‌ದಲ್ಲಿ ತೆರೆ ಕಾಣಿಸಲು ತಂಡವು ಯೋಜನೆ ಹಾಕಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.