ADVERTISEMENT

15ಕ್ಕೆ ‘ಓ ಮೈ ಲವ್’ ಚಿತ್ರ ತೆರೆಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 3:00 IST
Last Updated 3 ಜುಲೈ 2022, 3:00 IST
ಕೀರ್ತಿ ಕಲ್ಕೇರಿ, ಅಕ್ಷಿತ್‌ ಶಶಿಕುಮಾರ್‌
ಕೀರ್ತಿ ಕಲ್ಕೇರಿ, ಅಕ್ಷಿತ್‌ ಶಶಿಕುಮಾರ್‌   

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ‘ಓ ಮೈ ಲವ್’ ಚಿತ್ರ ಜುಲೈ 15ರಂದು ದಾವಣಗರೆಯ ತ್ರಿಶೂಲ್ ಸೇರಿ ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ಚಿತ್ರದ ನಿರ್ದೇಶಕಸ್ಮೈಲ್ ಶ್ರೀನು ತಿಳಿಸಿದರು.

‘ಗೆಳೆತನ, ಪ್ರೀತಿ ಮತ್ತು ಕೌಟಂಬಿಕ ಕಥೆಯ ಹಂದರ ಹೊಂದಿರುವ ಈ ಚಿತ್ರದ ಮೂಲಕ ಅಕ್ಷಿತ್ ಶಶಿಕುಮಾರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ನಾಯಕ ಮತ್ತು ನಾಯಕಿ ಟಫ್ ಕ್ಯಾರೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ನವರಸಗಳ ತೋರಿಸುವ ಸವಾಲನ್ನು ಚೆನ್ನಾಗಿ ನಿಭಾಯಿಸಿದ್ದಾರೆ’ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಎಸ್‌. ನಾರಾಯಣ್, ಸಾಧುಕೋಕಿಲ, ದೇವಗಿಲ್‌, ಟೆನ್ನಿಸ್ ಕೃಷ್ಣ, ‍ಪವಿತ್ರಾ ಲೋಕೇಶ್ ತಾರಾಂಗಣದಲ್ಲಿ ಇದ್ದು, ಚಿತ್ರದಲ್ಲಿ 6 ಹಾಡುಗಳಿವೆ. ಡಾ.ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ನಾಯಕ ಅಕ್ಷಿತ್ ಶಶಿಕುಮಾರ್‌, ‘ಚಿತ್ರದ ನಿರ್ದೇಶಕರು ಹೊಸ ನಾಯಕನ ಎಂಟ್ರಿಗೆ ಬೇಕಾದಂತಹ ಎಲ್ಲವನ್ನೂ ನೀಡಿದ್ದಾರೆ. ಪ್ರತಿ ಫ್ರೇಂ ಬಹಳ ಕಲರ್‌ಫುಲ್ ಆಗಿ ಮೂಡಿಬಂದಿವೆ. ಪ್ರೀತಿ, ಸ್ನೇಹ, ಕುಟುಂಬ ಎಲ್ಲವನ್ನೂ ಕಥೆ ಒಳಗೊಂಡಿದೆ. ನಮ್ಮ ತಂದೆ ಶಶಿಕುಮಾರ್ ಅವರಿಗೆ ನೀಡಿದ ಸಹಕಾರವನ್ನು ನನಗೂ ನೀಡಬೇಕು’ ಎಂದು ಮನವಿ ಮಾಡಿದರು.

‘ಮನೋರಂಜನ್ ರವಿಚಂದ್ರನ್ ಜೊತೆ ‘ಪ್ರಾರಂಭ’ ಚಿತ್ರದ ಬಳಿಕ ಈ ಚಿತ್ರದಲ್ಲಿ ಪಕ್ಕಾ ಬಬ್ಲಿ ಹುಡುಗಿಯಾಗಿ ನಟಿಸಿದ್ದೇನೆ’ ಎಂದು ಚಿತ್ರದ ನಾಯಕಿ ಕೀರ್ತಿ ಕಲ್ಕೆರೆ ಹೇಳಿದರು.

ಚಿತ್ರದ ನಿರ್ಮಾಪಕ ಜಿ. ರಾಮಾಂಜನಿ, ಸಹನಟಿ ಅಕ್ಷತಾ
ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.