ADVERTISEMENT

ನಿರ್ದೇಶಕರ ಜತೆ ಮಲಗಲು ನಿರಾಕರಿಸಿದ್ದಕ್ಕೆ ಅವಕಾಶಗಳನ್ನು ಕಳೆದುಕೊಂಡೆ –ನರ್ಗಿಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 6:53 IST
Last Updated 7 ಆಗಸ್ಟ್ 2021, 6:53 IST
ನರ್ಗಿಸ್‌
ನರ್ಗಿಸ್‌   

ಹೈದರಾಬಾದ್‌: 2011ರಲ್ಲಿ ತೆರೆಕಂಡ ರಾಕ್‌ಸ್ಟಾರ್‌ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದಕ್ಯೂಟ್‌ ಬೆಡಗಿ ನರ್ಗಿಸ್‌ ಫಖ್ರಿ ಬಾಲಿವುಡ್‌ನಲ್ಲಿರುವ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ.

ರಾಕ್‌ಸ್ಟಾರ್‌ ಸಿನಿಮಾನರ್ಗಿಸ್‌ ಫಖ್ರಿ ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ. ಇದರಲ್ಲಿನ ಅಭಿನಯಕ್ಕಾಗಿ ಫಿಲಂ ಫೇರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಂತರ ಬಂದ ಮದ್ರಾಸ್‌ ಕೆಫೆ ಸಿನಿಮಾ ಕೂಡ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸ್ಪೈ, ಹೌಸ್‌ಫುಲ್‌–3 ಸೇರಿದಂತೆ ಮೂರು ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನರ್ಗಿಸ್‌ ನಂತರದ ದಿನಗಳಲ್ಲಿ ಸಿನಿಮಾಗಳಿಂದ ದೂರ ಉಳಿದರು.

ADVERTISEMENT

ನಾನು ಸಿನಿಮಾದಿಂದ ದೂರ ಉಳಿಯಲು ಕಾಸ್ಟಿಂಗ್‌ ಕೌಚ್‌ ಕಾರಣವಾಗಿದೆ. ನಿರ್ದೇಶಕರೊಂದಿಗೆ ಮಲಗಲು ನಿರಾಕರಿಸಿದ್ದಕ್ಕೆ ಸಾಕಷ್ಟು ಸಿನಿಮಾಗಳ ಅವಕಾಶವನ್ನು ಕಳೆದುಕೊಂಡೆ ಎಂದು ನರ್ಗಿಸ್‌ ತೆಲುಗಿನ ಟಾಲಿವುಡ್‌.ನೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಮಾಡೆಲಿಂಗ್‌ ಕ್ಷೇತ್ರದಿಂದ ಸಿನಿಮಾಗೆ ಬಂದೇ, ಈ ಎರಡು ಕ್ಷೇತ್ರಗಳಲ್ಲೂ ಕಾಸ್ಟಿಂಗ್‌ ಕೌಚ್‌ ಜೀವಂತವಾಗಿದೆ. ಬೆತ್ತಲೆ ಅಥವಾ ಟಾಪ್‌ಲೆಸ್‌ ಆಗಿ ಫೋಟೊ ಶೂಟ್‌ ಮಾಡಿಸಿಕೊಳ್ಳಲು ನಿರ್ದೇಶಕರು ಹೇಳುತ್ತಿದ್ದರು. ಕೆಲವರಂತೂ ನೆರವಾಗಿಯೇ ಮಲಗಲು ಹೇಳುತ್ತಿದ್ದರು. ಇದಕ್ಕೆ ನಾನು ಒಪ್ಪದಿದ್ದಾಗ ಅವಕಾಶಗಳ ಕಡಿಮೆ ಆದವು. ಕೊನೆಗೆ ಈ ಉದ್ಯಮದಿಂದ ದೂರ ಉಳಿಯಬೇಕಾಯಿತು ಎಂದು ನರ್ಗಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.