ADVERTISEMENT

‘ಭಾಗಿ 3’ ಪೋಸ್ಟರ್ ಬಂತು: ಯಾವ ದೇಶದ ವಿರುದ್ಧ ಯುದ್ಧ ಟೈಗರ್‌ ಶ್ರಾಫ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2020, 12:14 IST
Last Updated 3 ಫೆಬ್ರುವರಿ 2020, 12:14 IST
ಭಾಗಿ 3 ಚಿತ್ರದ ಪೋಸ್ಟರ್
ಭಾಗಿ 3 ಚಿತ್ರದ ಪೋಸ್ಟರ್   

ಟೈಗರ್‌ ಶ್ರಾಫ್ ಅಭಿನಯದ ‘ಭಾಗಿ 3’ ಚಿತ್ರದ ಮೊದಲ ಪೋಸ್ಟರ್ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.

‘ಭಾಗಿ 1’ರಲ್ಲಿ ನಾಯಕಿಯಾಗಿದ್ದಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ‘ಭಾಗಿ’ ಸರಣಿಯಲ್ಲಿ ಮತ್ತೆ ನಾಯಕಿಯಾಗುತ್ತಿದ್ದಾರೆ. ‘ಭಾಗಿ 3’ ಚಿತ್ರದ ಪೋಸ್ಟರ್‌ನಲ್ಲಿರುವ‘ಈ ಬಾರಿ ದೇಶವೊಂದರ ವಿರುದ್ಧ’ ಎನ್ನುವ ಸಾಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಗುರುವಾರ (ಫೆ.6)ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಿರುವ ಟೈಗರ್ ಶ್ರಾಫ್, ‘ಶಕ್ತಿಶಾಲಿ ಶತ್ರುಗಳ ವಿರುದ್ಧ, ದೇಶವೊಂದರ ವಿರುದ್ಧ ದೊಡ್ಡ ಯುದ್ಧಕ್ಕಾಗಿ ರಾನಿ ಮತ್ತೆಬಂದಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.