ADVERTISEMENT

ಜುಲೈ 25ಕ್ಕೆ ಮಹೇಶ್‌ ರವಿಕುಮಾರ್‌ ಅವರ ‘ಬಂದೂಕ್‌’ ಸಿನಿಮಾ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 22:19 IST
Last Updated 10 ಜುಲೈ 2025, 22:19 IST
ಸಿನಿಮಾ ಪೋಸ್ಟರ್‌ 
ಸಿನಿಮಾ ಪೋಸ್ಟರ್‌    

ಚಿತ್ರರಂಗಕ್ಕೆ ಹೊಸ ನಿರ್ದೇಶಕರ ಪ್ರವೇಶ ನಿರಂತರವಾಗಿ ಆಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಮಹೇಶ್‌ ರವಿಕುಮಾರ್‌. ‘ಬಂದೂಕ್‌’ ಎನ್ನುವ ಸಿನಿಮಾವನ್ನು ಇವರು ನಿರ್ದೇಶಿಸಿದ್ದು, ಸಿನಿಮಾ ಜುಲೈ 25ಕ್ಕೆ ತೆರೆಕಾಣಲಿದೆ. 

ಈ ಚಿತ್ರದಲ್ಲಿ ಬಾಲಾಜಿ ಮನೋಹರ್, ಶ್ವೇತಾ ಪ್ರಸಾದ್, ಗೋಪಾಲಕೃಷ್ಣ ದೇಶಪಾಂಡೆ, ಶಂಕರ್ ಅಶ್ವಥ್, ಹರೀಶ್ ರೈ ಮುಂತಾದವರು ನಟಿಸಿದ್ದಾರೆ.

ಕ್ರೈಮ್‌ ಆ್ಯಕ್ಷನ್‌ ಡ್ರಾಮಾ ಕಥಾಹಂದರ ಹೊಂದಿರುವ ‘ಬಂದೂಕ್’ ಸಿನಿಮಾಗೆ ಶ್ರೀನಿವಾಸ್‌ ಮೂರ್ತಿ ಮತ್ತು ಚಂದ್ರಶೇಖರ್‌ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹೊನ್ನಾವರ, ಉಡುಪಿ, ಮಲ್ಪೆ, ಮಂಗಳೂರು ಮುಂತಾದ ಕಡೆ ಶೂಟಿಂಗ್‌ ನಡೆಸಿದೆ. ಎಚ್‌ ವೈ. ರೋಹಿತ್‌ ಕುಮಾರ್‌ ಛಾಯಾಚಿತ್ರಗ್ರಹಣ, ವಸಂತಕುಮಾರ್‌ ಸಂಕಲನ, ಪ್ರಸನ್ನ ಕುಮಾರ್‌ ಎಂ.ಎಸ್‌. ಸಂಗೀತ ಚಿತ್ರಕ್ಕಿದೆ. ಸದ್ಯ ಫಸ್ಟ್‌ಲುಕ್‌ ಬಿಡುಗಡೆ ಮಾಡಿರುವ ಚಿತ್ರತಂಡ ಪ್ರಚಾರಕ್ಕೆ ಇಳಿದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.