ADVERTISEMENT

ರಾಜಸ್ಥಾನದಲ್ಲಿ ‘ಬೋಲೆ ಚೂಡಿಯಾ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:30 IST
Last Updated 28 ಆಗಸ್ಟ್ 2019, 19:30 IST
ನವಾಜುದ್ದೀನ್‌ 
ನವಾಜುದ್ದೀನ್‌    

ನವಾಜುದ್ದೀನ್‌ ಸಿದ್ಧಿಕಿ, ತಮನ್ನಾ ಭಾಟಿಯಾ, ಕಬೀರ್‌ ದುಹಾನ್ ಸಿಂಗ್‌ ಹಾಗೂ ರಾಜ್‌ಪಾಲ್‌ ಯಾದವ್‌ ‘ಬೋಲೆ ಚೂಡಿಯಾ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದ ದೃಶ್ಯಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಸಿನಿಮಾದ ಚಿತ್ರೀಕರಣ ರಾಜಸ್ಥಾನದ ಮಾಂಡ್ವಾದಲ್ಲಿನ ರೆಸಾರ್ಟ್‌ವೊಂದರಲ್ಲಿ ನಡೆಯುತ್ತಿದ್ದು, ಶೂಟಿಂಗ್‌ನ ಖುಷಿ ಕ್ಷಣಗಳನ್ನು ನಟ, ನಟಿಯರು ಹಂಚಿಕೊಂಡಿದ್ದಾರೆ.

ಈ ಚಿತ್ರದ ಚಿತ್ರೀಕರಣ ಆಗಸ್ಟ್‌ 1ರಿಂದ ಆರಂಭವಾಗಿದೆ. 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ADVERTISEMENT

ಇತ್ತೀಚೆಗೆ ನವಾಜುದ್ದೀನ್‌ ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮತ್ತೊಂದು ವಿಡಿಯೊದಲ್ಲಿ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಹಾಡಿನ ಚಿತ್ರೀಕರಣದ ಹಾಸ್ಯ ಸನ್ನಿವೇಶಗಳು ಇವೆ. ಈ ವಿಡಿಯೊ ಸಹ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.