ADVERTISEMENT

BIGG BOSS ವಿಜೇತ ಶೈನ್‌ ಶೆಟ್ಟಿಗೆ ದೊರೆತ ನಗದು ಬಹುಮಾನ ಇಷ್ಟು...

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 11:02 IST
Last Updated 3 ಫೆಬ್ರುವರಿ 2020, 11:02 IST
   
""

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ 7ನೇ ಆವೃತ್ತಿಯಲ್ಲಿ ಕಿರುತೆರೆ ನಟ ಶೈನ್‌ ಶೆಟ್ಟಿ ವಿಜೇತರಾಗಿದ್ದು ₹ 61 ಲಕ್ಷ ಬಹುಮಾನ ಪಡೆದಿದ್ದಾರೆ.

ಬಿಗ್‌ ಬಾಸ್‌ ಕಾರ್ಯಕ್ರಮ ನಿರೂಪಕ ಹಾಗೂ ನಟ ಸುದೀಪ್‌, ‘ಬಿಗ್‌ಬಾಸ್‌’ ಪಟ್ಟಕ್ಕೆ ಶೈನ್‌ ಶೆಟ್ಟಿ ವಿಜೇತರಾಗಿದ್ದಾರೆ ಎಂದು ಘೋಷಣೆ ಮಾಡಿದರು. ಸಮೀಪದಪ್ರತಿಸ್ಪರ್ಧಿ ನಟ ಕುರಿ ಪ್ರತಾಪ್ ರನ್ನರ್‌ ಅಪ್‌ ಸ್ಥಾನ ಪಡೆದರು.ವಾಸುಕಿ ವೈಭವ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಶೈನ್‌ ಶೆಟ್ಟಿ ಅವರಿಗೆ ಬಹುಮಾನವಾಗಿ ಬಿಗ್‌ ಬಾಸ್‌ ಕಡೆಯಿಂದ ₹ 50 ಲಕ್ಷ ನಗದು, ಟ್ರೋಫಿ ಹಾಗೂ ಕಾರು ನೀಡಲಾಯಿತು. ಇತರೆ ಪ್ರಾಯೋಜಕರು ₹ 11 ಲಕ್ಷ ಬಹುಮಾನ ನೀಡಿದ್ದಾರೆ. ಶೈನ್‌ ಶೆಟ್ಟಿ ಒಟ್ಟು ₹ 61 ಲಕ್ಷ ನಗದು ಹಾಗೂ ಕಾರನ್ನು ಪಡೆದಿದ್ದಾರೆ.

ADVERTISEMENT

20 ಸ್ಪರ್ಧಿಗಳು ಈ ಬಾರಿಯ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದರು. ಪ್ರೇಕ್ಷಕರ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಸ್ವೀಕರಿಸಿ ಖುಷಿ ಹಂಚಿಕೊಂಡ ಶೈನ್‌ಶೆಟ್ಟಿ, ’ಇದು ನನ್ನ ಜೀವನದ ಗೆಲುವು’ ಎಂದರು.

ರನ್ನರ್ ಅಪ್ಕುರಿ ಪ್ರತಾಪ್ ಸಿಕ್ಕಿದೆಷ್ಟು?

ಬಿಗ್ ಬಾಸ್ ನಲ್ಲಿ ಎರಡನೇ ಸ್ಥಾನ ಪಡೆದ ಕುರಿ ಪ್ರತಾಪ್‌ಗೆ ಸಹ ಬಹುಮಾನ ರೂಪದಲ್ಲಿ ನಗದು ಹಣ ಪಡೆದಿದ್ದಾರೆ.ಕುರಿ ಪ್ರತಾಪ್‌ಗೆ ₹ 6 ಲಕ್ಷ ರೂಪಾಯಿ ನೀಡಲಾಗಿದೆ.

ಪೈನಲ್‌ ತಲುಪಿದ್ದ 5 ಜನರಿಗೆ ನಗದು ಬಹುಮಾನ ನೀಡಲಾಗಿದೆ. ಕ್ರಮವಾಗಿ ಮೂರನೇ ಸ್ಥಾನ ಪಡೆದವಾಸುಕಿ ವೈಭವ್, ನಾಲ್ಕನೇ ಸ್ಥಾನ ಪಡೆದ ದೀಪಿಕಾ ದಾಸ್‌ ಹಾಗೂ ಐದನೇ ಸ್ಥಾನ ಪಡೆದ ಭೂಮಿ ಶೆಟ್ಟಿ ಅವರಿಗೆ ತಲಾ₹ 1 ಲಕ್ಷ ನಗದು ಬಹುಮಾನ ನೀಡಲಾಗಿದೆ. ಟಾಸ್ಕ್‌ನಲ್ಲಿ ನೃತ್ಯ ಮಾಡಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದ ದೀಪಿಕಾ ದಾಸ್‌ಗೆ ಹೆಚ್ಚುವರಿಯಾಗಿ ₹ 5 ಲಕ್ಷ ರೂಪಾಯಿ ಬಹುಮಾನ ದೊರೆತಿದೆ.

ಕಳೆದ ಸಲದ ಬಿಗ್‌ಬಾಸ್‌ಗಿಂತ ಈ ಬಾರಿಯ ಸ್ಪರ್ಧಿಗಳು ಹೆಚ್ಚು ಸಂಭಾವನೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.