ADVERTISEMENT

ಪಿಗ್ಗಿಯ ಗೋಲ್ಡನ್‌ ಉಡುಪಿಗೆ ಅಭಿಮಾನಿಗಳು ಫಿದಾ..!

​ಪ್ರಜಾವಾಣಿ ವಾರ್ತೆ
Published 24 ಮೇ 2021, 7:54 IST
Last Updated 24 ಮೇ 2021, 7:54 IST
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌    

ಬಿಲ್‌ಬೋರ್ಡ್‌ ಸಂಗೀತ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಾಸ್‌ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಇಡೀ ಸಮಾರಂಭವನ್ನು ಕಳೆಗಟ್ಟುವಂತೆ ಮಾಡಿದರು.

ಅಮೆರಿಕದ ಲಾಸ್‌ ಎಂಜಲೀಸ್‌ನಲ್ಲಿ ಭಾನುವಾರ ಸಂಜೆ ನಡೆದ ಬಿಲ್‌ಬೋರ್ಡ್‌ ಸಂಗೀತ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಸ್‌ ವಿಶೇಷ ಅತಿಥಿಗಳಿಗೆ ಭಾಗವಹಿಸಿದ್ದರು.

ಪ್ರಿಯಾಂಕಾಬಂಗಾರ ಬಣ್ಣದ ಗೌನ್‌ ಮೂಲಕ ಗಮನ ಸೆಳೆದರೇ, ಅವರ ಪತಿ ನಿಕ್‌ ಜೋನಾಸ್‌ ಕೂಡ ಹಸಿರು ಶೂಟ್‌ನಲ್ಲಿ ಮಿಂಚಿದರು. ರೆಡ್‌ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಈ ಜೋಡಿ ಛಾಯಾಗ್ರಾಹಕರಿಗೆ ವಿವಿಧ ಭಂಗಿಯಲ್ಲಿ ಪೋಸ್‌ ನೀಡಿದರು.

ADVERTISEMENT

ಬಿಲ್‌ಬೋರ್ಡ್‌ ಸಂಗೀತ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಚಿತ್ರಗಳನ್ನು ಪ್ರಿಯಾಂಕಾಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಪಿಗ್ಗಿ(ಪ್ರಿಯಾಂಕಾ)ಯ ಚಿತ್ರಗಳಿಗೆ ಅಭಿಮಾನಿಗಳು ಸಖತ್‌ ಫಿದಾ ಆಗಿರುವುದು ಸುಳ್ಳಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.