ADVERTISEMENT

ಮಾದಕ ವ್ಯಸನಿಗಳ ಕಣ್ಣಲ್ಲಿ ಈ ಜಗತ್ತು ಕಾಣುವುದು ಹೀಗೆ...BLANK

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 10:49 IST
Last Updated 24 ಡಿಸೆಂಬರ್ 2019, 10:49 IST
ಪೂರ್ಣಚಂದ್ರ ಮೈಸೂರು
ಪೂರ್ಣಚಂದ್ರ ಮೈಸೂರು   

ಮಾದಕ ದ್ರವ್ಯದ ಚಟಕ್ಕೆ ದಾಸರಾದವರ ಕಣ್ಣಿನಲ್ಲಿ ಈ ಲೋಕ ಹೇಗೆ ಕಾಣಿಸುತ್ತದೆಎಂದು ತೋರಿಸಲಿರುವ ಮತ್ತು 13 ಅಂಕಿಯ ಮಿಥ್ಯೆಯನ್ನು ಕಳಚಲು ಹೊರಟಿರುವ ‘ಬ್ಲಾಂಕ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಚಿತ್ರದ ಶೀರ್ಷಿಕೆ ಹಾಡಿಗೆ ಮತ್ತು ಕೆಲವು ಸನ್ನಿವೇಶಗಳಿಗೆ ಕೆಜಿಎಫ್‌ ಚಿತ್ರದ ಗರುಡ ಪಾತ್ರಧಾರಿ ಗರುಡ ರಾಮ್‌ ನೀಡಿರುವ ಧ್ವನಿಯೂ ಚಿತ್ರದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

ಚಿತ್ರದ ನಾಯಕಿಯಾಗಿ ಕೃಷಿ ತಾಪಂಡ ನಟಿಸಿದ್ದು, ನಾಯಕನಾಗಿ ಭರತ್ ಹಾಸನ ನಟಿಸಿದ್ದಾರೆ. ಈ ಚಿತ್ರಕ್ಕೆ ಮೈಸೂರಿನ ಎಸ್‌. ಜಾಯ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿ ನೇರ ಚಿತ್ರರಂಗಕ್ಕೆ ಕಾಲಿಟ್ಟಿರುವ ಜಾಯ್‌ಗೆ ಇದು ಚೊಚ್ಚಲ ಸಿನಿಮಾ. ಹಾಗೆಯೇ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಭರತ್‌ಗೂ ಇದು ನಾಯಕನಾಗಿ ಚೊಚ್ಚಲ ಸಿನಿಮಾ. 32 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಮೊದಲ ಹಂತದಲ್ಲಿ ಚಿಕ್ಕಮಗಳೂರು ಮತ್ತು ಕಡೂರು ಭಾಗದಲ್ಲಿ ಚಿತ್ರೀಕರಿಸಲಾಗಿದೆ.

ADVERTISEMENT

‘ಕೆಲವರಿಗೆ 13 ಅಂಕಿಯ ಬಗ್ಗೆ ಕೆಲವು ಮಿಥ್‌ಗಳಿವೆ. ಅದನ್ನೇಕೇಂದ್ರವಾಗಿಟ್ಟುಕೊಂಡುಸೈಕಾಲಜಿಕಲ್ ಥ್ರಿಲ್ಲರ್ ಮತ್ತು ಡ್ರಾಮಾ ರೀತಿಯ ಸಿನಿಮಾ ಮಾಡಿದ್ದೇವೆ. ಹಾರರ್‌, ಕೌಟುಂಬಿಕ ಮನರಂಜನೆಯೂ ಇದೆ. ವಾಸ್ತವ ಮತ್ತು ಕನಸುಗಳ ನಡುವಿನ ವ್ಯತ್ಯಾಸದ ಕಥೆಯನ್ನು ಹೇಳಲಿದ್ದೇವೆ,ಯುವಜನರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿರುವುದು ಸಾಮಾಜಿಕ ಪಿಡುಗಿನಂತಾಗಿರುವುದರಿಂದ ಸಮಾಜಕ್ಕೂ ಒಂದು ಸಂದೇಶ ನೀಡುವ ವಸ್ತು ಈ ಚಿತ್ರದಲ್ಲಿದೆ’ ಎಂದರು ನಿರ್ದೇಶಕ ಎಸ್‌. ಜಾಯ್‌.

ನಾಯಕಿ ಕೃಷಿ ತಾಪಂಡ ‘ಲವ್ಲಿ, ಬಬ್ಲಿ ಹುಡುಗಿಯ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೆ. ನನ್ನ ಸಿನಿಮಾ ಬದುಕಿನಲ್ಲಿ ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ನಟಿಸಿದ್ದೇನೆ. ಇದು ನನಗೆಪ್ರಯೋಗಾತ್ಮಕ ಪಾತ್ರ.ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿರುವ ಎಲ್ಲ ಪ್ರಮುಖ ಪಾತ್ರಗಳ ಜತೆಗೆ ನನ್ನ ಕಾಂಬಿನೇಷನ್‌ ಇದೆ’ ಎಂದರು.

‘ಈ ಚಿತ್ರವನ್ನು ಹಲವು ತಂತ್ರಜ್ಞರು ಸೇರಿ ಮಾಡಿದ್ದೇವೆ. ಈ ಚಿತ್ರ ನಮಗೆಲ್ಲರಿಗೂ ಹೊಸ ಅವಕಾಶಗಳನ್ನು ಚಿತ್ರರಂಗದಲ್ಲಿ ಸೃಷ್ಟಿಸಲಿದೆ’ ಎಂದರು ಚಿತ್ರದ ವಸ್ತವಿನ್ಯಾಸಕಿ ವೀಣಾ.

ಚಿತ್ರದ ಟೈಟಲ್‌ ಕಾರ್ಡ್‌ ಬಿಡುಗಡೆ ಮಾಡಿ ಚಿತ್ರತಂಡವನ್ನು ಹರಸಿದನಟ ಗರುಡ ರಾಮ್, ಜಾಯ್‌ ಹೊಸ ಹುಡುಗನಾದರೂ ಆತನಲ್ಲಿರುವಸಿನಿಮಾ ಬಗೆಗಿನ ಒಲವು ಮತ್ತು ಶ್ರದ್ಧೆ ನನ್ನನ್ನು ಈ ಚಿತ್ರಕ್ಕೆ ಹಾಡುವಂತೆ ಮತ್ತು ಧ್ವನಿ ನೀಡುವಂತೆ ಮಾಡಿತು. ಹೊಸಬರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.

ಎರಡನೇ ನಾಯಕಿ ಎಂ.ಸಿ.ತೀರ್ಥಾ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿಸುಚೇಂದ್ರ ಪ್ರಸಾದ್‌, ಪ್ರಶಾಂತ ಸಿದ್ದಿ, ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆಎನ್.ಪಿ. ಮಂಜುನಾಥ ಪ್ರಸನ್ನ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣಪುರುಷೋತ್ತಮ, ಸಂಗೀತ ಶ್ರೀ ಶಾಸ್ತ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.