ADVERTISEMENT

‘ಬ್ಲಡ್ ರೋಸಸ್’ ಹಿಡಿದ ಧರ್ಮಕೀರ್ತಿರಾಜ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 23:33 IST
Last Updated 14 ಸೆಪ್ಟೆಂಬರ್ 2025, 23:33 IST
ಧರ್ಮ ಕೀರ್ತಿರಾಜ್‌
ಧರ್ಮ ಕೀರ್ತಿರಾಜ್‌   

ಸ್ಯಾಂಡಲ್‌ವುಡ್‌ ನಟ ಧರ್ಮ ಕೀರ್ತಿರಾಜ್ ತೆಲುಗಿನಲ್ಲಿಯೂ ಸಕ್ರಿಯರಾಗಿದ್ದಾರೆ. ಅವರ ನಟನೆಯ ‘ಬ್ಲಡ್ ರೋಸಸ್’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಂ.ಗುರುರಾಜನ್ ನಿರ್ದೇಶನದ ಚಿತ್ರ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. 

‘ಸಮಾಜದಲ್ಲಿ ನಡೆದಿರುವ ಹಾಗೂ ಪ್ರಸಕ್ತ ನಡೆಯುತ್ತಿರುವ ಒಂದಷ್ಟು ನೈಜ ಅಂಶಗಳನ್ನು ಹೊಂದಿರುವ ಚಿತ್ರಕಥೆ. ಕ್ರೈಂ, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಜಾನರ್‌ನ ಚಿತ್ರವಿದು’ ಎಂದಿದೆ ಚಿತ್ರತಂಡ.

ಅಪ್ಸರ ರಾಣಿ ನಾಯಕಿ. ಪೆದ್ದಪಲ್ಲಿ ರೋಹಿತ್‌ ಸಂಗೀತ,  ಬೋಗಿರೆಡ್ಡಿ ಶಿವಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.