ADVERTISEMENT

ಅಮಿತಾಭ್, ಜಯಾ.. 46ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:30 IST
Last Updated 4 ಜೂನ್ 2019, 19:30 IST
amitabh
amitabh   

ಬಾಲಿವುಡ್‌ನ ಎವರ್‌ಗ್ರೀನ್‌ ಜೋಡಿ ಅಮಿತಾಭ್ ಬಚ್ಚನ್‌ ಹಾಗೂ ಜಯಾ ಬಚ್ಚನ್‌ 46ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಜೂನ್‌ 3ರಂದು ಈ ಜೋಡಿ ಮದುವೆಯಾಗಿ 46 ವರ್ಷ ತುಂಬಿದೆ. ಈ ಖುಷಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪುತ್ರ ಅಭಿಷೇಕ್‌ ಬಚ್ಚನ್‌ ಹಂಚಿಕೊಂಡಿದ್ದಾರೆ.

‘ಹ್ಯಾಪಿ ಆ್ಯನಿವರ್ಸರಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. #46 ರ ಸಂಭ್ರಮ ಹೀಗೇ ಇರಲಿ’ ಎಂದು ಶುಭಾಶಯ ಕೋರಿದ್ದಾರೆ.

ADVERTISEMENT

ಶುಭಾಶಯದೊಂದಿಗೆ ಅಮಿತಾಭ್ ಹಾಗೂ ಜಯ ಜೋಡಿಯ ಇತ್ತೀಚಿನ ಫೋಟೊ ಒಂದನ್ನು ಟ್ಯಾಗ್‌ ಮಾಡಿದ್ದಾರೆ. ಕಪ್ಪು ಜಾಕೆಟ್‌ ಹಾಗೂ ಬಿಳಿ ಕುರ್ತಾದೊಂದಿಗೆ ಅಮಿತಾಭ್ ಮಿಂಚಿದ್ದಾರೆ. ಹಳದಿ ಬಣ್ಣದ ಡ್ರೆಸ್‌ನಲ್ಲಿ ಜಯಾ ಬಚ್ಚನ್‌ ಕಾಣಿಸಿಕೊಂಡಿದ್ದಾರೆ. ಗುಡ್ಡಿ, ಏಕ್‌ ನಜರ್‌, ಬಾವರ್ಚಿ, ಶೋಲೆ, ಕಬಿ ಖುಷಿ ಕಬಿ ಘಮ್‌, ಅಭಿಮಾನ್‌, ಚುಪ್ಕೆ ಚುಪ್ಕೆ ಸಿನಿಮಾಗಳಲ್ಲಿಈ ಜೋಡಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿತ್ತು. 1973ರಲ್ಲಿ ಈ ಜೋಡಿ ವಿವಾಹವಾಗಿತ್ತು. ಅದಾದ ಒಂದು ತಿಂಗಳಲ್ಲಿ ಅಮಿತಾಭ್ ನಟನೆಯ ಜಂಜೀರ್ ಸಿನಿಮಾ ಬಿಡುಗಡೆಗೊಂಡಿತ್ತು.

ಅಮಿತಾಬ್ ಬಚ್ಚನ್‌ ಮುಂದಿನ ಸಿನಿಮಾಗಳು:ಇಮ್ರಾನ್‌ ಹಶ್ಮಿ ಅವರೊಂದಿಗೆ ‘ಚೆಹ್ರೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಆರ್ಯನ್‌ ಮುಖರ್ಜಿಯ ‘ಬ್ರಹ್ಮಾಸ್ತ್ರ’ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್‌ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.