
ಹಿರಿಯ ನಟ ಸತೀಶ್ ಶಾ
ಚಿತ್ರ: ಡೆಕ್ಕನ್ ಹೆರಾಲ್ಡ್
ಮುಂಬೈ: ‘ಜಾನೇ ಭಿ ದೋ ಯಾರೋ’ದಂತಹ ಐತಿಹಾಸಿಕ ಸಿನಿಮಾದ ಹಾಸ್ಯಪಾತ್ರ ದಿಂದ ಹೆಸರುವಾಸಿಯಾಗಿದ್ದ, ‘ಯೇ ಜೋ ಹೈ ಜಿಂದಗಿ’, ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಟೆಲಿವಿಷನ್ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಸತೀಶ್ ಶಾ ಅವರು ಶನಿವಾರ
ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಾಸ್ಯನಟ ಗೋವರ್ಧನ್ ಅಸರಾನಿ, ಜಾಹೀರಾತು ನಿರೂಪಕ ಪೀಯೂಷ್ ಪಾಂಡೆ ನಿಧನರಾದ ಕೆಲವು ದಿನಗಳಲ್ಲಿ ಮತ್ತೊಬ್ಬ ನಟನನ್ನು ಕಳೆದುಕೊಂಡಂತಾಗಿದೆ.
ಸತೀಶ್ ಶಾ ನಿಧನವಾಗಿರುವುದನ್ನು ಸಿನಿ ಹಾಗೂ ಟಿವಿ ಕಲಾವಿದರ ಒಕ್ಕೂಟ, ಭಾರತೀಯ ಸಿನಿಮಾ ನಿರ್ದೇಶಕರ ಒಕ್ಕೂಟ ಹಾಗೂ ಅಖಿಲ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟವು ಖಚಿತಪಡಿಸಿದೆ.
‘ಸತೀಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸಲ್ಲಿಸುತ್ತಿದ್ದೇವೆ. 1985ರಿಂದಲೂ ಸಂಘದ ಸಕ್ರಿಯ ಸದಸ್ಯರಾಗಿ
ಕಾರ್ಯನಿರ್ವಹಿಸುತ್ತಿದ್ದರು’ ಎಂದು ಒಕ್ಕೂಟವು ತಿಳಿಸಿದೆ.
‘ಅವರು ಹೃದಯಾಘಾತದಿಂದ ನಿಧನರಾದರು ಎಂದು ತೋರುತ್ತದೆ. ಆದರೂ ಅವರ ಸಾವಿನ ಕುರಿತು ವೈದ್ಯರ ಅಂತಿಮ ವರದಿಯನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರ ಸಹಾಯಕ ಆಪ್ತ ಸಹಾಯಕ ರಮೇಶ್ ಕಡತಲಾ ತಿಳಿಸಿದ್ದಾರೆ.
ಸತೀಶ್ ಶಾ ನಿಧನಕ್ಕೆ ನಿರ್ಮಾಪಕ ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಅವರು, ‘ಪ್ರಸಿದ್ಧ ನಟ ಮತ್ತು ಮಹಾನ್ ವ್ಯಕ್ತಿ ಸತೀಶ್ ಶಾ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿರುವ ಸುದ್ದಿ ತಿಳಿದು ದುಃಖವಾಗುತ್ತಿದೆ. ಅವರ ನಿಧನ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ‘ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.