ADVERTISEMENT

ಇಸಾಬೆಲ್ಲಾ ಬಾಲಿವುಡ್‌ಗೆ ಎಂಟ್ರಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
.
.   

ಬಾಲಿವುಡ್ ನಟಿ ಕತ್ರೀನಾ ಕೈಫ್ ಸಹೋದರಿ ಇಸಾಬೆಲ್ಲಾ ಕೈಫ್ ಬಾಲಿವುಡ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಆಯುಷ್‌ ಶರ್ಮಾ ನಾಯಕನಟನಾಗಿ ನಟಿಸುತ್ತಿರುವ ‘ಕ್ವಾಥಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಆಯುಷ್‌ ಕಳೆದ ವರ್ಷ ಬಿಡುಗಡೆಯಾಗಿದ್ದ ‘ಲವ್‌ಯಾತ್ರಿ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಅವರು ಸಲ್ಮಾನ್‌ ತಂಗಿ ಅರ್ಪಿತಾ ಖಾನ್ ಪತಿ. ಈ ಸಿನಿಮಾವನ್ನು ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದರು.

ನ್ಯೂಯಾರ್ಕ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಸಾಬೆಲ್ಲಾ ನಟನೆತರಬೇತಿ ಪಡೆಯುತ್ತಿದ್ದರು. ಕೆನಡಿಯನ್‌ ಸಿನಿಮಾ ‘ಡಾ. ಕ್ಯಾಬ್ಬಿ’ ಯಲ್ಲಿ ನಟಿಸಿದ್ದರು. ಇದರ ಸಹ– ನಿರ್ಮಾಪಕರೂ ಸಲ್ಮಾನ್‌ ಖಾನ್.

ADVERTISEMENT

‘ಕ್ವಾಥಾ’ ಸಿನಿಮಾದಲ್ಲಿ ಆಯುಷ್‌ ಸೇನಾಧಿಕಾರಿಯಾಗಿ ನಟಿಸಲಿದ್ದಾರೆ. ಕರಣ್‌ ಲಲಿತ್‌ ಭೂತಾನಿ ನಿರ್ದೇಶನ ಈ ಚಿತ್ರಕ್ಕಿದೆ. ಕ್ವಾಥಾ ಎಂಬುದು ಭಾರತ ಹಾಗೂ ಮ್ಯಾನ್ಮಾರ್‌ ದೇಶಗಳ ಗಡಿಪ್ರದೇಶದ ಸಣ್ಣ ಗ್ರಾಮ. ಸೇನೆಯಲ್ಲಿನ ಸತ್ಯ ಘಟನೆಗಳನ್ನೇ ಆಧರಿಸಿದ ದೃಶ್ಯಗಳು ಈ ಸಿನಿಮಾದಲ್ಲಿವೆ ಎಂದು ಭೂತಾನಿ ಹೇಳಿದ್ದಾರೆ.

ಕಲ್ಟ್‌ ಎಂಟರ್‌ಟೇನ್‌ಮೆಂಟ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.