ADVERTISEMENT

ಸಿನಿ ಸುದ್ದಿ | ‘ಬಾಸ್‌’ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:49 IST
Last Updated 31 ಅಕ್ಟೋಬರ್ 2025, 23:49 IST
ಮೋನಿಕಾ ಗೌಡ
ಮೋನಿಕಾ ಗೌಡ   

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದ ‘ಬಾಸ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಡಿಸೆಂಬರ್‌ನಲ್ಲಿ ಸಿನಿಮಾವನ್ನು ರಿಲೀಸ್‌ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. 

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. 

‘ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ. ಕೆಲವೇ ದಿನಗಳಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್.ಆರ್.ಪುರ ಛಾಯಾಚಿತ್ರಗ್ರಹಣ, ಮಹೇಶ್ ರೆಡ್ಡಿ ಸಂಕಲನ ಸಿನಿಮಾಗಿದೆ’ ಎಂದರು ವಿ.ಲವ.

ADVERTISEMENT

‘ಇದು ನಾನು ನಾಯಕನಾಗಿ ನಟಿಸಿರುವ ಐದನೇ ಚಿತ್ರ’ ಎಂದು ಮಾತು ಆರಂಭಿಸಿದ ತನುಷ್ ಶಿವಣ್ಣ, ‘ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ನಿರ್ವಹಣೆ ಮಾಡಿದ್ದೇನೆ. ಚಿತ್ರದಲ್ಲಿ ಎಲ್ಲರೂ ನನ್ನನ್ನು ‘ಬಾಸ್’ ಎನ್ನುತ್ತಾರೆ. ಹೀಗಾಗಿಯೇ ಈ ಶೀರ್ಷಿಕೆ’ ಎಂದರು. ‘ಶೀಲಾ’ ಎನ್ನುವ ಪಾತ್ರದಲ್ಲಿ ಮೋನಿಕಾ ಗೌಡ ನಟಿಸಿದ್ದಾರೆ. ಸಂದೀಪ್, ವೀರೇನ್ ಕೇಶವ್, ಸುಜನ್ ಶೆಟ್ಟಿ, ದುನಿಯಾ ಮಹೇಶ್, ಜೋಶ್ ಅಕ್ಷಯ್, ಮಹೇಶ್, ಮನು, ಮಂಡ್ಯ ರವಿ, ಮಹೇಂದ್ರ ರಾವ್, ಪೃಥ್ವಿ, ನಿಶಾಂತ್, ಮೋಹಿತ್, ಲಕ್ಷ್ಮಣ್ ಪೂಜಾರಿ ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.