ADVERTISEMENT

‘ಬ್ರಹ್ಮಕಮಲ’ ತಂದ ಪೂರ್ಣಚಂದ್ರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:49 IST
Last Updated 27 ಸೆಪ್ಟೆಂಬರ್ 2022, 6:49 IST
ಅದ್ವಿತಿ ಶೆಟ್ಟಿ
ಅದ್ವಿತಿ ಶೆಟ್ಟಿ   

ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಕಥೆ, ಚಿತ್ರಕಥೆ ನಿರ್ದೇಶನದ ಚಿತ್ರ ಬ್ರಹ್ಮ ಕಮಲದ ಚಿತ್ರೀಕರಣ ಭರ್ಜರಿಯಾಗಿ ನಡೆದಿದೆ. ಪೂರ್ಣ ಚಂದ್ರ ಫಿಲ್ಮ್ಸ್ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.

ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ‘ಬ್ರಹ್ಮ ಕಮಲ’ ಎಂದಿದ್ದಾರೆ ನಿರ್ದೇಶಕರು.

ತಾರಾಗಣದಲ್ಲಿ ಅದ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್, ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ ಅಭಿನಯಿಸುತ್ತಿದ್ದಾರೆ.

ADVERTISEMENT

ಛಾಯಾಗ್ರಹಣ ಲೋಕೇಂದ್ರ ಸೂರ್ಯ, ಸಂಕಲನ ದೀಪು ಸಿ.ಎಸ್., ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ.ಎ.ಕೆ. ಪುಟ್ಟರಾಜು ಕಾರ್ಯಕಾರಿ ನಿರ್ಮಾಪಕರು.ಋತು ಚೈತ್ರ ನಿರ್ಮಾಣ ನಿರ್ವಹಣೆ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.