ADVERTISEMENT

ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಚೌಕಿದಾರ್‌ ಸಿನಿಮಾ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:31 IST
Last Updated 20 ಜನವರಿ 2026, 23:31 IST
<div class="paragraphs"><p>ಪೃಥ್ವಿ ಅಂಬಾರ್‌,&nbsp;ಧನ್ಯಾ ರಾಮ್​​ಕುಮಾರ್</p></div>

ಪೃಥ್ವಿ ಅಂಬಾರ್‌, ಧನ್ಯಾ ರಾಮ್​​ಕುಮಾರ್

   

ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ಆ್ಯಕ್ಷನ್‌ ಕಟ್‌ ಹೇಳಿರುವ ‘ಚೌಕಿದಾರ್‌’ ಚಿತ್ರ ಜ.30ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ಒಬ್ಬನೇ ಮಗನನ್ನು ಮುದ್ದಾಗಿ ಬೆಳೆಸುವ, ತನಗೆ ಬಾಲ್ಯದಲ್ಲಿ ದೊರಕದ ಎಲ್ಲಾ ಸೌಲಭ್ಯಗಳನ್ನು ಮಗನಿಗೆ ನೀಡುವ ಅಪ್ಪನ ಕಥೆ ಇದಾಗಿದೆ. ಒಟ್ಟಾರೆ ಅಪ್ಪ ಮಗನ ಬಾಂಧವ್ಯದ ಕುರಿತ ಕಥೆಯನ್ನು ಟ್ರೇಲರ್‌ ಸಂಕ್ಷಿಪ್ತವಾಗಿ ಹೇಳಿದ್ದು, ಒಂದಿಷ್ಟು ಥ್ರಿಲ್ಲರ್‌ ಅಂಶಗಳನ್ನೂ ನಿರ್ದೇಶಕರು ಇದಕ್ಕೆ ಬೆರೆಸಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್ ಹಾಗೂ ಪೃಥ್ವಿ ಅಂಬಾರ್‌ ತಂದೆ–ಮಗನಾಗಿ ಜೊತೆಯಾಗಿದ್ದಾರೆ. ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್​​ಕುಮಾರ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಫ್ಯಾಮಿಲಿ ಡ್ರಾಮಾ ಜಾನರ್‌ನಲ್ಲಿದೆ.

ADVERTISEMENT

ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ‘ಚೌಕಿದಾರ್ ಅಂದರೆ ಸಂರಕ್ಷಿಸುವಾತ. ಈ ಶೀರ್ಷಿಕೆಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಇದೊಂದು ಕೌಟುಂಬಿಕ ಚಿತ್ರ’ ಎಂದರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ‘ಸಾಯಿಕುಮಾರ್ ಅವರು ಈ ಸಿನಿಮಾದ ನಿಜವಾದ ನಾಯಕ. ಈ ಸಿನಿಮಾ ಕೇವಲ ಮನರಂಜನೆಯಷ್ಟೇ ಆಗಿರದೆ ಒಂದಷ್ಟು ಆಲೋಚನೆಗಳನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡಲಿದೆ’ ಎಂದರು.

‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ವಿ.ಎಸ್. ಎಂಟರ್‌ಟೇನ್ಮೆಂಟ್‌ ಬ್ಯಾನರ್​ನಡಿ ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.