ADVERTISEMENT

ಪ್ರಥಮ ಹಂತ ಮುಗಿಸಿದ ‘ಹಳ್ಳಿ ಹೈಕ್ಳ ಪ್ಯಾಟೇ ಲೈಫು’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 14:34 IST
Last Updated 25 ಡಿಸೆಂಬರ್ 2018, 14:34 IST
‘ಹಳ್ಳಿ ಹೈಕ್ಳ ಫ್ಯಾಟೇ ಲೈಪು’ ಸಿನಿಮಾದ ದೃಶ್ಯ
‘ಹಳ್ಳಿ ಹೈಕ್ಳ ಫ್ಯಾಟೇ ಲೈಪು’ ಸಿನಿಮಾದ ದೃಶ್ಯ   

ಸುದೀಪ್‍ರಾಜ್ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಾಪಕ ಶ್ರೀರಾಜಶೇಖರ್.ಜಿ., ಎಂ.ರಾಮಕೃಷ್ಣಯ್ಯ ನಿರ್ಮಿಸುತ್ತಿರುವ ‘ಹಳ್ಳಿ ಹೈಕ್ಳ ಪ್ಯಾಟೇ ಲೈಫು’ ಹಳ್ಳಿ ಸೊಗಡಿನ ಸಂಪೂರ್ಣ ಹಾಸ್ಯಮಯ ಚಿತ್ರದ ಹತ್ತು ದಿವಸಗಳ ಪ್ರಥಮ ಹಂತದ ಚಿತ್ರೀಕರಣವು ಈಚೆಗೆ ರಾಮನಗರದಲ್ಲಿ ಮುಕ್ತಾಯಗೊಂಡಿತು. ‘ಈಗಷ್ಟೇ ಸಿನಿಮಾದ ಮೊದಲ ಹಂದ ಚಿತ್ರೀಕರಣ ಪೂರ್ಣಗೊಳಿಸಿ ಬಂದಿದ್ದೇವೆ. ದ್ವಿತೀಯ ಹಂತದ ಚಿತ್ರೀಕರಣವು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿದೆ’ ಎಂದು ನಿರ್ಮಾಪಕ ರಾಜಶೇಖರ್ ತಿಳಿಸಿದ್ದಾರೆ.

ಚಿತ್ರಕ್ಕೆ ರಾಜಶೇಖರ್ ಕಥೆ, ನಾಗರಾಜ್ ಛಾಯಾಗ್ರಹಣ, ಯುಗಾಂತ್ ಸಂಗೀತ, ವೈ.ಎಸ್. ಸುರೇಶ್ ಕೃಷ್ಣ ಜಿ.ರಾವ್ ಸಂಭಾಷಣೆ, ರಮೇಶ್ ಕಲೆ, ಸಂಜೀತ್ ರೆಡ್ಡಿ ಸಂಕಲನ, ರಾಜ್‍ದೇವ್, ಚಂದ್ರಿಕ ನೃತ್ಯ, ಕೆ. ಬಾಲು, ಪುನೀತ್ ಸಾಹಸವಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಮಂಜು ಗಂಗಾವತಿ ಹೊತ್ತಿದ್ದಾರೆ.

ತಾರಾಗಣದಲ್ಲಿ ಮಡೆನೂರು ಮನು (ಕಾಮಿಡಿ ಕಿಲಾಡಿ ವಿಜೇತ), ರಾಘವೇಂದ್ರ ಮಿಂಚು, ಸೌಜನ್ಯಾ, ವರ್ಷಿತಾ, ಐಶ್ವರ್ಯಾ, ಭಾರತಿ, ಗೋವಿಂದೇಗೌಡ, ಸದಾನಂದ್‍ ಕಾಳ, ಮಂಜು, ಹಿನು, ಅಂಜನಪ್ಪ, ರಾಮಕೃಷ್ಣಪ್ಪ ಶಿವಕುಮಾರ್, ಆರಾಧ್ಯ, ಅರಸೀಕೆರೆ ರಾಜು, ಅಂಜನಾ ಗಿರೀಶ್, ದಿವ್ಯಾ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.