ಹಿಂದಿ ಮತ್ತು ತೆಲುಗು ನಟಿ ಅದಾ ಶರ್ಮಾ ಆಗೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಫೋಟೊಗಳನ್ನು ಹಾಕಿ ತನ್ನ ಅಭಿಮಾನಿಗಳಿಗೆ ರಂಜನೆ ಕೊಡುತ್ತಿರುವ ಸುಂದರಿ.
ಸ್ಟೈಲಿಶ್ ಉಡುಗೆ ತೊಡುಗೆಗಳಿಂದ ಹೋದಲ್ಲೆಲ್ಲಾ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ ಅದಾ. ತೆಲುಗಿನ ‘ಜೆರ್ಸಿ’ಯನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ.ಮತ್ತೊಂದು ಚಿತ್ರ ‘ಕಲ್ಕಿ’ ತೆರೆಗೆ ಬರಲು ಸಿದ್ಧವಾಗಿದೆ. ಅಷ್ಟರಲ್ಲೇಹಿಂದಿಯಲ್ಲಿ ‘ಬೈಪಾಸ್’ ಚಿತ್ರಕ್ಕಾಗಿ ಮಾತುಕತೆ ಮುಗಿಸಿದ್ದಾರೆ.ಅದಾ, ಮೊನ್ನೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತನ್ನ ಆಕರ್ಷಕ ಉಡುಗೆ ತೊಡುಗೆ ಮತ್ತು ಕೂದಲ ಬಣ್ಣದಿಂದ ‘ಔಟ್‌ಫಿಟ್ ಆಫ್ ದಿ ಡೇ’ ಎಂದು ನೆಟಿಜನರಹೆಗ್ಗಳಿಕೆಗೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.