ADVERTISEMENT

‘ಧಾಂಗಡಿ’ ಈ ವಾರ ತೆರೆಗೆ

ಈ ವಾರ ತೆರೆಗೆ ಬರಲಿರುವ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 10:12 IST
Last Updated 5 ಜುಲೈ 2018, 10:12 IST
   

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜೀವನ, ಹೋರಾಟಗಳು, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಅವರು ಕೈಗೊಂಡ ಯೋಜನೆಗಳು ಮತ್ತು ಅವರ ಕನಸುಗಳ ಬಗ್ಗೆ ಹೇಳುವ ‘ಧಾಂಗಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಕೆ. ಶರತ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅಮಾವಾಸ್ಯೆ ದಿನದಂದು ಚಿತ್ರೀಕರಣ ಶುರು ಮಾಡಿ ಅದೇ ದಿನದಂದು ಕುಂಬಳಕಾಯಿ ಒಡೆದಿರುವುದು ಈ ಚಿತ್ರದ ವಿಶೇಷ. ಅಂಬೇಡ್ಕರ್‌ ಪಾತ್ರದಲ್ಲಿ ನಟಿಸಿರುವ ಡಾ.ಸಿದ್ರಾಮ ಕಾರಣಿಕ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂಬೇಡ್ಕರ್‌ಅಭಿಮಾನಿಯಾಗಿ ಜೀವನದಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಪಾತ್ರಕ್ಕೆ ಸಂಜು ಜೀವ ತುಂಬಿದ್ದಾರೆ.

ಡಾ.ಸವಿತಾ, ರಾಘವೇಂದ್ರ ಸಿಂಪಿ, ಕನಕಲಕ್ಷ್ಮಿ, ಜಯಸೂರ್ಯ, ಭೀಮಪ್ಪ ಗಡಾದ, ಮಹೇಶ ವಾಲಿ ತಾರಾಗಣದಲ್ಲಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಪ್ರಮೋದ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿ, ದೀಪು ಅವರದ್ದು. ರಾಜಶೇಖರರೆಡ್ಡಿ ಸಂಕಲನ ನಿರ್ವಹಿಸಿದ್ದಾರೆ.

ADVERTISEMENT

ಸುರೇಂದ್ರ ಉಗಾರೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಲವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ.

ಈ ವಾರ ತೆರೆಗೆ ಬರಲಿರುವ ಸಿನಿಮಾಗಳು

6ನೇ ಮೈಲಿ

ಬಿ.ಎಸ್. ಶೈಲೇಶ್ ಕುಮಾರ್ ನಿರ್ಮಿಸಿರುವ ಚಿತ್ರ ‘6ನೇ ಮೈಲಿ’.ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಸಿನಿಮಾಗೆ ಸಾಯಿಕಿರಣ್ ಸಂಗೀತ ನಿರ್ದೇಶನ, ಪರಮೇಶ್ ಪಿ.ಎಂ. ಅವರ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ. ನೇತ್ರಾ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಜಾಹ್ನವಿ, ಆರ್.ಜೆ. ಸುದೇಶ್‌, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಇದ್ದಾರೆ.

ಕುಚ್ಚಿಕೂ ಕುಚ್ಚಿಕು

ಎನ್. ಕೃಷ್ಣಮೂರ್ತಿ ಅವರು ನಿರ್ಮಿಸಿರುವ ‘ಕುಚ್ಚಿಕೂ ಕುಚ್ಚಿಕು’ ಚಿತ್ರದ ನಿರ್ದೇಶಕರುಡಿ. ರಾಜೇಂದ್ರ ಬಾಬು. ಇದು ಅವರ ನಿರ್ದೇಶನದಕೊನೆಯ ಚಿತ್ರ. ನಿರ್ದೇಶಕರೇ ಚಿತ್ರಕಥೆ ಬರೆದಿದ್ದಾರೆ. ಪ್ರವೀಣ್ ಗೌಡ ಹಾಗೂ ಜಯಕೃಷ್ಣ ನಾಯಕರಾಗಿ ಅಭಿನಯಿಸಿದ್ದಾರೆ. ನಕ್ಷತ್ರಾ ನಾಯಕಿಯಾಗಿ ನಟಿಸಿದ್ದಾರೆ. ತಾರಾಬಳಗದಲ್ಲಿ ಸುಮಿತ್ರಾ, ರಮೇಶ್‍ ಭಟ್, ವಿಜಯ್ ಕೌಂಡಿನ್ಯ, ಸುಂದರ ರಾಜ್, ಕಾರ್ತಿಕ್, ಶೈಲಜಾ ಜೋಶಿ, ಪವನ್ ಇದ್ದಾರೆ.ಹಂಸಲೇಖರ ಸಾಹಿತ್ಯ ಹಾಗೂ ಸಂಗೀತವಿರುವ ಈ ಚಿತ್ರಕ್ಕೆ ಎಂ.ಯು. ನಂದಕುಮಾರ್ ಅವರ ಛಾಯಾಗ್ರಹಣವಿದೆ.

ಕನ್ನಡಕ್ಕಾಗಿ ಒಂದನ್ನು ಒತ್ತಿ

ಎಡಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’.ಕುಶಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಿಷಿಕೇಶ್ ಅವರ ಛಾಯಾಗ್ರಹಣವಿದೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ಎಸ್. ಶತಮರ್ಷಣ, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಜಯಶ್ರೀ, ರಂಗಾಯಣ ರಘು, ಉಮೇಶ್, ಎಚ್.ಎಂ.ಟಿ. ವಿಜಯ್, ತಾರಾಬಳಗದಲ್ಲಿದ್ದಾರೆ.

ಪರಸಂಗ

ಕೆ.ಎಂ. ರಘು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರ ‘ಪರಸಂಗ’.ಎಚ್. ಕುಮಾರ್, ಎಂ. ಮಹಾದೇವ ಗೌಡ, ಕೆ. ಎಂ. ಲೋಕೇಶ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಧಾನ ಪಾತ್ರದಲ್ಲಿ ಮಿತ್ರ ಮತ್ತು ಅಕ್ಷತಾ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಚಂದ್ರಪ್ರಭಾ ಇದ್ದಾರೆ.ಹರ್ಷವರ್ಧನ ರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕ್ರಾಂತಿಯೋಗಿ ಮಹಾದೇವರು

ಇದು ನಿರ್ದೇಶಕ ಸಾಯಿಪ್ರಕಾಶ್ ಅವರ 101ನೇ ಸಿನಿಮಾ.ರಾಮ್‌ಕುಮಾರ್ ಕ್ರಾಂತಿಯೋಗಿ ಮಹಾದೇವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಕುಮಾರ್, ಗಣೇಶ್ ರಾವ್, ರಮೇಶ್ ಭಟ್, ಸುಚಿತ್ರಾ, ಸಿಹಿಕಹಿ ಚಂದ್ರು, ಡಿಂಗ್ರಿ ನಾಗ ರಾಜ್, ಸಿತಾರಾ ತಾರಾಗಣದಲ್ಲಿ ಇದ್ದಾರೆ.

ಮಾಧವಾನಂದ ಶೇಗುಣಿಸಿ ಅವರ ಕಥೆ, ಸಂಭಾಷಣೆ, ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ, ಬಿ. ಬಲರಾಮ್ ಸಂಗೀತ ಈ ಸಿನಿಮಾಕ್ಕಿದೆ.

ಅಸತೋಮ ಸದ್ಗಮಯ

‘ಅಸತೋಮ ಸದ್ಗಮಯ’ ಚಿತ್ರಕ್ಕೆ ರಾಜೇಶ್ ವೇಣೂರ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಅಶ್ವಿನ್ ಪಿರೇರಾ ಹಣ ಹೂಡಿದ್ದಾರೆ. ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯಾ ನಾಗರಾಜ್, ದೀಪಕ್ ಶೆಟ್ಟಿ ಹಾಗೂ ಬೇಬಿ ಚಿತ್ರಾಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಹಾಬ್ ಸಲೀಂ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ವಿಜಯ್ ಪ್ರಕಾಶ್, ಅನುರಾಧಾ ಭಟ್, ಪದ್ಮಲತಾ, ಅಲಾಪ್ ರಾಜು ಹಾಡಿದ್ದಾರೆ. ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಿಶೋರ್ ಕುಮಾರ್ ಛಾಯಾಗ್ರಹಣವಿದೆ.

ವಜ್ರ

ಮ್ಯಾಡ್ ಟ್ಯಾಕೀಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಚಿತ್ರ ‘ವಜ್ರ’. ಪ್ರವೀಣ್ ಗಂಗಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ಮೊನಿಶ್ ಕುಮಾರ್ ಸಂಗೀತ ಈ ಚಿತ್ರಕ್ಕಿದೆ. ಪ್ರವೀಣ್ ಗಂಗಾ, ಸುಷ್ಮಿತಾ, ಬಾಲಾ ರಾಜವಾಡಿ, ಕಾರ್ತಿಕ್ ಗಿರಿ, ದಿನೇಶ್, ಸೂರ್ಯಕಿರಣ್, ಪವನ್, ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.