ಮುಂಬೈ:ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ!
ಈ ವಿಷಯವನ್ನು ದೀಪಿಕಾ ಪಡುಕೋಣೆ ಇನ್ನುಖಚಿತಪಡಿಸಿಲ್ಲ. ಆದರೆ ಅವರು ಭಾನುವಾರ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ತಾವು ಮಗುವಾಗಿದ್ದಾಗಿನಫೋಟೊವನ್ನು ಪೊಸ್ಟ್ ಮಾಡಿ 'ದೀಪಾವಳಿ ಬಳಿಕ ಸಂಭ್ರಮ‘ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು ದೀಪಿಕಾ ತಾಯಿಯಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂದು ಅವರಅಭಿಮಾನಿಗಳು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ದೀಪಿಕಾಪೋಸ್ಟ್ಗೆ ಅಭಿಮಾನಿಗಳುಅಭಿನಂದನೆಗಳನ್ನು ಹೇಳುತ್ತಿದ್ದಾರೆ.
ದೀಪಿಕಾ ಮತ್ತುಪತಿ ರಣವೀರ್ ಅವರು ಕಳೆದ ಮಾರ್ಚ್ನಲ್ಲಿಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ ಎಂದು ಆಗಲೇ ಸುದ್ದಿಯೊಂದು ವೈರಲ್ ಆಗಿತ್ತು.
ದೀಪಿಕಾ ಈ ಹಿಂದೆ ಹಲವು ಸಲ ತಮ್ಮ ಬಾಲ್ಯದ ಚಿತ್ರಗಳು ಹಾಗೂ ಮಕ್ಕಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.ಬಾಲಿವುಡ್ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.