ADVERTISEMENT

ಖ್ಯಾತ ವಸ್ತ್ರವಿನ್ಯಾಸಕ ವೆಂಡೆಲ್‌ ರಾಡ್ರಿಕ್ಸ್‌ ನಿಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 7:41 IST
Last Updated 13 ಫೆಬ್ರುವರಿ 2020, 7:41 IST
ವೆಂಡೆಲ್‌ ರಾಡ್ರಿಕ್ಸ್‌ 
ವೆಂಡೆಲ್‌ ರಾಡ್ರಿಕ್ಸ್‌    

ಪಣಜಿ:ಮಾಡೆಲಿಂಗ್‌ ಲೋಕದ ದಿಗ್ಗಜ ಎಂದೇ ಖ್ಯಾತರಾಗಿದ್ದವಸ್ತ್ರವಿನ್ಯಾಸಕ ವೆಂಡೆಲ್‌ ರಾಡ್ರಿಕ್ಸ್‌ಉತ್ತರ ಗೋವಾದಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಅವರಿಗೆ 59 ವರ್ಷ ವಯಸ್ಸಾಗಿತ್ತು.ವೆಂಡೆಲ್‌ ರಾಡ್ರಿಕ್ಸ್‌ ನಿಧನಕ್ಕೆ ಬಾಲಿವುಡ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಗಾಡ್‌ಫಾದರ್‌ ಎಂದೇವೆಂಡೆಲ್‌ ರಾಡ್ರಿಕ್ಸ್‌ ಖ್ಯಾತರಾಗಿದ್ದರು. ಬಾಲಿವುಡ್‌ ಸಿನಿಮಾಗಳಿಗೂ ವಸ್ತ್ರವಿನ್ಯಾಸ ಮಾಡಿದ್ದರು. ವಿದೇಶಗಳಲ್ಲೂ ಹಲವು ಪ್ಯಾಶನ್‌ ಶೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಇವರ ಸೇವೆಗೆ ಭಾರತ ಸರ್ಕಾರ 2014ರಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತ್ತು.

ADVERTISEMENT

ಸ್ವಂತ ಮಾಡೆಲಿಂಗ್‌ ಕಂಪೆನಿಯನ್ನು ಹೊಂದಿದ್ದರು. ಪ್ಯಾಶನ್‌ ಲೋಕಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಹಲವು ಹೋರಾಟಗಳನ್ನು ನಡೆಸಿದ್ದರು.

ಬಾಲಿವುಡ್‌ನ ಅನುಷ್ಕಾ ಶರ್ಮಾ, ಮಲೈಕಾ ಆರೋರ, ಪೂಜಾ ಬೇಡಿ, ನಿರ್ದೇಶಕ ಮಧುರ್‌ ಭಂಡಾರ್ಕರ್‌, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.