ADVERTISEMENT

‘ಇಸ್ಮಾರ್ಟ್‌ ಶಂಕರ್‌’ ತಮಿಳಿಗೆ ರಿಮೇಕ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
   

ಹಿಟ್‌ ಆದ ಸಿನಿಮಾಗಳನ್ನು ಬೇರೆ ಭಾಷೆಯಲ್ಲಿ ರಿಮೇಕ್‌ ಮಾಡುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ‘ಇಸ್ಮಾರ್ಟ್‌ ಶಂಕರ್‌’. ಪುರಿ ಜಗನ್ನಾಥ್‌ ನಿರ್ದೇಶನದ ಈ ಸಿನಿಮಾವು ಬಿಡುಗಡೆಯಾದ ಒಂದೇ ವಾರದಲ್ಲಿ ಭಾರಿ ಲಾಭ ಗಳಿಸಿತ್ತು. ಈಗಲೂ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

‘ಇಸ್ಮಾರ್ಟ್‌ ಶಂಕರ್‌’ ಸಿನಿಮಾದಲ್ಲಿ ‘ಲವರ್‌ ಬಾಯ್‌’, ‘ಪಕ್ಕದ್ಮನೆ ಹುಡುಗ’ ಎಂಬ ಇಮೇಜ್‌ ಹೊಂದಿರುವ ನಟ ರಾಮ್‌ ಪೊತಿನೆನಿ ಅವರು ಮೊದಲ ಬಾರಿಗೆ ರೌಡಿ ಅವತಾರದಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ನಭಾ ನಟೇಶ್‌ ಹಾಗೂ ನಿಧಿ ಅಗರ್‌ವಾಲ್‌ ಅಭಿನಯಿಸಿದ್ದಾರೆ. ಈ ಸಿನಿಮಾ ಹಿಟ್‌ ಆಗಿರುವ ಬೆನ್ನಲ್ಲೇ ಹಿಂದಿ ಹಾಗೂ ತಮಿಳಿಗೆ ರಿಮೇಕ್‌ ಮಾಡಲು ಸ್ಪರ್ಧೆ ಏರ್ಪಟ್ಟಿದೆ.

ಇತ್ತೀಚಿನ ವರದಿ ಪ್ರಕಾರ, ಸದ್ಯದಲ್ಲೇ ಈ ಸಿನಿಮಾ ತಮಿಳಿಗೆ ರಿಮೇಕ್‌ ಆಗಲಿದೆ. ತಮಿಳು ನಿರ್ಮಾಪಕರೊಬ್ಬರು ಈ ಹಕ್ಕನ್ನು ಪಡೆದುಕೊಂಡಿದ್ದಾರೆ. ನಟ ಧನುಷ್‌ ಈ ಚಿತ್ರದಲ್ಲಿರಾಮ್‌ ಪೊತಿನೆನಿ ನಿರ್ವಹಿಸಿದ ಪಾತ್ರವನ್ನು ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೆ ಈ ಚಿತ್ರದ ರಿಮೇಕ್‌ ಹಕ್ಕನ್ನು ಪಡೆದುಕೊಂಡಿರುವ ನಿರ್ಮಾಪಕರು ಧನುಷ್‌ ಜೊತೆ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ರೌಡಿ ಇಮೇಜ್‌ನ ಅನೇಕ ಸಿನಿಮಾಗಳಲ್ಲಿ ಧನುಷ್‌ ನಟಿಸಿದ್ದಾರೆ. ಅವರು ಪಾತ್ರವನ್ನು ಚೆನ್ನಾಗಿ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.