
ಧರ್ಮ ಕೀರ್ತಿರಾಜ್ ನಟನೆಯ, ಎಂ.ಆರ್. ಶ್ರೀನಿವಾಸ್ ನಿರ್ದೇಶನದ ‘ದಾಸರಹಳ್ಳಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಪಿ.ಉಮೇಶ ನಿರ್ಮಾಣದ ಈ ಚಿತ್ರ ಮಾಸ್ ಜಾನರ್‌ನಲ್ಲಿದೆ. ‘ತಾಯಿ ಬೆಂಬಲ ಇದ್ದರೂ ತಂದೆ ಬೆಂಬಲ ಇಲ್ಲದೆ ಹೋದರೆ ಮಕ್ಕಳು ಏನಾಗುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹಿರಿಯ ಕಲಾವಿದರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ಅವರು ನಟನೆಯ ಜೊತೆ ಸಾಹಸ ನಿರ್ದೇಶನವನ್ನೂ ಮಾಡಿದ್ದಾರೆ’ ಎಂದರು ನಿರ್ದೇಶಕ ಎಂ. ಆರ್. ಶ್ರೀನಿವಾಸ್.
‘ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವಿದೆ. ಚಿತ್ರದಲ್ಲಿ ನಾಲ್ಕು ಕಥೆಗಳಿದ್ದು, ಒಂದೊಂದು ಕಥೆಯೂ ನೋಡುಗರನ್ನು ಕಾಡುತ್ತದೆ. ಸಿನಿಮಾವನ್ನು ಫೆಬ್ರುವರಿಗೆ ಬಿಡುಗಡೆ ಮಾಡಲು ಯೋಜನೆಯಿದೆ’ ಎನ್ನುತ್ತಾರೆ ಧರ್ಮ ಕೀರ್ತಿರಾಜ್.
ಧರ್ಮ ಕೀರ್ತಿರಾಜ್‌ಗೆ ಜೋಡಿಯಾಗಿ ನೇಹಾ ನಟಿಸಿದ್ದು, ಇದು ಇವರ ಚೊಚ್ಚಲ ಸಿನಿಮಾ. ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ. ಉಮೇಶ್ ರಾಜ್, ಜಾಗ್ವಾರ್ ಸಣ್ಣಪ್ಪ, ಎಂ.ಎಸ್.ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ ಚಿತ್ರದಲ್ಲಿದ್ದಾರೆ. ಎಂ. ಎಸ್. ತ್ಯಾಗರಾಜ ಸಂಗೀತ, ಸಿ. ನಾರಾಯಣ್ ಮತ್ತು ಬಾಲು ಛಾಯಾಚಿತ್ರಗ್ರಹಣ, ಆರ್.ಡಿ. ರವಿ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.