ADVERTISEMENT

ಸಿಂಗಿಂಗ್ ಸ್ಟಾರ್ ರಾನು ಮಂಡಲ್‌ಗೆ ₹ 55 ಲಕ್ಷದ ಮನೆ ನೀಡಿದರೇ ಸಲ್ಮಾನ್ ಖಾನ್?

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 1:59 IST
Last Updated 29 ಆಗಸ್ಟ್ 2019, 1:59 IST
   

ನವದೆಹಲಿ:ದಿನಬೆಳಗಾಗುವುದರಲ್ಲಿ ಇಂಟರ್‌ನೆಟ್‌ ಸೆನ್ಸೇಷನ್‌ ಆದ ಸಿಂಗಿಂಗ್ ಸ್ಟಾರ್ರಾನು ಮಂಡಲ್ ಮತ್ತೆ ಸುದ್ದಿಯಾಗಿದ್ದಾರೆ. ಅವರಿಗೆ ಬಾಲಿವುಡ್‌ ನಟ ಸಲ್ಮಾನ್ ಖಾನ್ ₹ 55 ಲಕ್ಷ ಮೌಲ್ಯದ ಮನೆಯೊಂದನ್ನು ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮಂಡಲ್ ಅವರ ಮಾಂತ್ರಿಕ ಧ್ವನಿಯಿಂದ ಮೋಡಿಗೊಳಗಾಗಿರುವ ಸಲ್ಮಾನ್ ಮನೆ ಉಡುಗೊರೆ ನೀಡಿದ್ದಾರೆ ಎಂದು ಹಿಂದಿ ಜಾಲತಾಣಜಾಗರಣ್ವರದಿ ಮಾಡಿದೆ. ‘ದಬಾಂಗ್ 3’ ಸಿನಿಮಾಗೆ ಮಂಡಲ್‌ ಅವರಿಂದ ಹಾಡೊಂದನ್ನು ಹಾಡಿಸಲೂ ಸಲ್ಮಾನ್ ಚಿಂತನೆ ನಡೆಸಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ. ಆದರೆ, ಈ ವಿಚಾರವನ್ನು ಸಲ್ಮಾನ್ ಖಾನ್ ದೃಢಪಡಿಸಿಲ್ಲ.

ADVERTISEMENT

ಹಿನ್ನೆಲೆ ಗಾಯಕ ಹಿಮೇಶ್ ರೇಶಮಿಯಾ ಜತೆ ಇತ್ತೀಚೆಗೆ ಚಿತ್ರವೊಂದರಕ್ಕಾಗಿರಾನು ಮಂಡಲ್ಹಾಡಿದ್ದರು.ಆ ಚಿತ್ರದ ಹೆಸರು: ಹ್ಯಾಪಿ ಹಾರ್ಡಿ ಅಂಡ್ ಹೀರ್. ಗೀತೆ: ತೇರಿ ಮೇರಿ ಕಹಾನಿ.

ಯಾರೀ ರಾನು ಮಂಡಲ್?:ಪಶ್ಚಿಮಬಂಗಾಳದ ರಣಘಾಟ್‌ನವರಾದ ರಾನು ಮಂಡಲ್ರೈಲ್ವೆ ಫ್ಲಾಟ್‌ಫಾರಂನಲ್ಲಿ ಆತ್ಮಖುಷಿಗೆ ಹಾಡುತ್ತಿದ್ದರು. ಇದು ಅವರ ಹೊಟ್ಟೆ ಹೊರೆಯಲೂ ನೆರವಾಗುತ್ತಿತ್ತು. ಆಕೆ ದನಿಯಲ್ಲಿ ಗಾಯಕಿ ಲತಾ ಮಂಗೇಷ್ಕರ್‌ ಛಾಯೆ ಗುರುತಿಸಿದ ಒಬ್ಬರು ಹಾಡನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದರು. ಅದು ಅವರ ಅದೃಷ್ಟವನ್ನೇ ಬದಲಿಸಿತ್ತು.ಪಶ್ಚಿಮ ಬಂಗಾಳದವರು ಎಂಬುದನ್ನು ಬಿಟ್ಟರೆ, ರಾನು ಮಂಡಲ್‌ ಯಾರು? ಹಿನ್ನೆಲೆ ಏನು? ಎಂಬುದು ಅಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.