ADVERTISEMENT

ಕಪ್ಪು ಉಡುಗೆ ತೊಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೆ ಬಿಸಿ ಏರಿಸಿದ ದಿಶಾ ಪಟಾನಿ 

​ಪ್ರಜಾವಾಣಿ ವಾರ್ತೆ
Published 28 ಮೇ 2022, 12:25 IST
Last Updated 28 ಮೇ 2022, 12:25 IST
   

ಮುಂಬೈ: ಬಾಲಿವುಡ್‌ನ ಮಾದಕ ನಟಿ ದಿಶಾ ಪಟಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ್ಗೆ ತಮ್ಮ ಕಲರ್‌ಫುಲ್ ಚಿತ್ರಗಳು, ವರ್ಕೌಟ್ ಮತ್ತು ಡ್ಯಾನ್ಸ್ ವಿಡಿಯೊಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ.

ಶುಕ್ರವಾರ ದಿಶಾ, ಕಪ್ಪು ಟ್ಯೂಬ್ ಟಾಪ್‌ನಲ್ಲಿ ಕ್ಯಾಮೆರಾದತ್ತ ಮಾದಕ ನೋಟ ಬೀರುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಕಾಮೆಂಟ್‌ಗಳು ಬಂದಿದ್ದು, ದಿಶಾ ಬಾಯ್‌ಫ್ರೆಂಡ್ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಹೃದಯದ ಎಮೊಜಿಗಳನ್ನು ಹರಿಬಿಟ್ಟಿದ್ದಾರೆ.

ದಿಶಾ ಪಟಾನಿ ಕೊನೆಯದಾಗಿ 'ರಾಧೆ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜಾನ್ ಅಬ್ರಹಾಂ, ತಾರಾ ಸುತಾರಿಯಾ ಮತ್ತು ಅರ್ಜುನ್ ಕಪೂರ್ ಅವರ ಜೊತೆ ಮೋಹಿತ್ ಸೂರಿ ನಿರ್ದೇಶನದ ಏಕ್ ವಿಲನ್–2 ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ. ಜುಲೈ 8, 2022ರಂದು ಚಿತ್ರ ತೆರೆಗೆ ಬರಲಿದೆ.

ADVERTISEMENT

ಇದರ ಜೊತೆಗೆ, ಧರ್ಮ ಪ್ರೊಡಕ್ಷನ್ಸ್‌ನ ಆಕ್ಷನ್ ಡ್ರಾಮಾ ಯೋಧ ಚಿತ್ರದಲ್ಲೂ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಜೊತೆ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.