ADVERTISEMENT

ಜ. 8ಕ್ಕೆ ತೆರೆ ಕಾಣಲಿದೆ ಎಚ್‌.ಎಸ್‌. ವೆಂಕಟೇಶ ಮೂರ್ತಿ ಅಭಿನಯದ ‘ಅಮೃತವಾಹಿನಿ‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 7:47 IST
Last Updated 28 ಡಿಸೆಂಬರ್ 2020, 7:47 IST
ಡಾ. ಎಚ್‌.ಎಸ್‌. ವೆಂಕಟೇಶ ಮೂರ್ತಿ
ಡಾ. ಎಚ್‌.ಎಸ್‌. ವೆಂಕಟೇಶ ಮೂರ್ತಿ   

ಖ್ಯಾತಸಾಹಿತಿ ಡಾ.ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರು ಮೊದಲ ಬಾರಿಗೆ ‍ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ಅಮೃತವಾಹಿನಿ’ ಚಿತ್ರ ಜನವರಿ 8 ರಂದು ತೆರೆಗೆ ಬರಲಿದೆ. ಯು.ವಿ. ಪ್ರೊಡಕ್ಷನ್ ಲಾಂಛನದಲ್ಲಿ ಅನಂತಪದ್ಮನಾಭ ಅರ್ಪಿಸುವ ಈ ಚಿತ್ರವನ್ನು ಕೆ. ಸಂಪತ್‌ಕುಮಾರ್‌ ಹಾಗೂ ಅಕ್ಷಯ್‌ರಾವ್ ನಿರ್ಮಿಸಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಾಘವೇಂದ್ರ ಬಿ. ಪಾಟೀಲ್‌ ಕಥೆ ಬರೆದಿದ್ದು, ಕೆ. ನರೇಂದ್ರ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನರೇಂದ್ರ ಬಾಬು ಈ ಹಿಂದೆ ಪಲ್ಲಕ್ಕಿ, ಯುವ, ಓ‌ ಗುಲಾಬಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವೆಂಕಟೇಶ ಮೂರ್ತಿ ಅವರೇ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ. ಶಿವಾನಂದ್ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಕೆ.ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ADVERTISEMENT

ವೈದ್ಯ ಶಿವಮೊಗ್ಗ, ಸಂತೋಷ್ ಕರ್ಕಿ, ಮಧು ಸಾಗರ್, ಮಂಜೇಶ್ ಕಲಾಲ್, ಭಾಸ್ಕರ್, ಜಗದೀಶ್, ಮಂಜುನಾಥ್ ಬೂದಿಹಾಳಮಟ್, ಮಾ. ಆರ್ಯನ್ ಸೂರ್ಯ, ಡಾ. ವತ್ಸಲಾ ಮೋಹನ್, ಸುಪ್ರಿಯಾ. ಎಸ್. ರಾವ್, ಗೀತಾ ಸೂರ್ಯವಂಶಿ, ಆರ್.ಟಿ. ರಮಾ, ಬೇಬಿ ಋತ್ವಿ, ಡಾ. ಶೈಲಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಮೃತವಾಹಿನಿ‌ ಚಿತ್ರವು ಈಗಾಗಲೇ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ(CClT) ಪ್ರದರ್ಶನವಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.