ADVERTISEMENT

ಸೆಟ್ಟೇರಲಿದೆ ದೃಶ್ಯಂ-2: ಅನೀಶ್‌ಗೆ ಮತ್ತೆ ಅವಕಾಶ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 12:48 IST
Last Updated 6 ನವೆಂಬರ್ 2020, 12:48 IST
ದೃಶ್ಯಂ 2 ಚಿತ್ರದ ಪೋಸ್ಟರ್‌
ದೃಶ್ಯಂ 2 ಚಿತ್ರದ ಪೋಸ್ಟರ್‌   

‘ದೃಶ್ಯಂ -2’ಸೆಟ್ಟೇರಲು ಸಿದ್ಧತೆ ನಡೆದಿದೆ. 2015ರಲ್ಲಿ ಮಲೆಯಾಳಂನಲ್ಲಿ ಭಾರೀ ಯಶಸ್ಸು ಕಂಡಿದ್ದ ‘ದೃಶ್ಯಂ’ಚಿತ್ರ ಕನ್ನಡಲ್ಲಿ ರವಿಚಂದ್ರನ್‌ ಅಭಿನಯದ ‘ ದೃಶ್ಯʼ ಆಗಿ ರಿಮೇಕ್‌ ಆಗಿತ್ತು.

ಇದೀಗ ಮಲೆಯಾಳಂನಲ್ಲಿ ‘ದೃಶ್ಯಂ -2’ ಸಿದ್ಧವಾಗುತ್ತಿದೆ. ದೃಶ್ಯಂ ಮೊದಲ ಭಾಗದಲ್ಲಿ ರಾಜೇಶ್‌ ಪಾತ್ರ ನಿರ್ವಹಿಸಿದ್ದ ಅನೀಶ್‌ ಜಿ. ಮೆನನ್‌ ಈ ಚಿತ್ರದಲ್ಲೂ ಇರಲಿದ್ದಾರೆ.

ನಿರ್ದೇಶಕ ಜೀತು ಜೋಸೆಫ್‌ ಅವರು ಕರೆ ಮಾಡಿ ಈ ವಿಚಾರ ಹೇಳಿದಾಗ ಅನೀಶ್‌ಗೆ ಬಹಳ ಖುಷಿ ಆಯಿತಂತೆ. ಹೀಗೆಂದು ಅವರು ವೆಬ್‌ ಪೋರ್ಟಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅನೀಶ್‌ ಈಗಾಗಲೇ ಎರಡು ದಿನದ ಶೂಟಿಂಗ್‌ ಮುಗಿಸಿದ್ದಾರೆ.

ADVERTISEMENT

‘ನನ್ನ ಆರಂಭದ ಹಂತದಲ್ಲೇ ಈ ರೀತಿ ವೇದಿಕೆ ಸಿಕ್ಕಿರುವುದು ನಿಜಕ್ಕೂ ನನಗೆ ಖುಷಿ ತಂದಿದೆ. ಜನ ನನ್ನನ್ನು ಮೋಹನ್‌ಲಾಲ್‌ ಬಾಮೈದ ಎಂದೇ ಗುರುತಿಸುತ್ತಿದ್ದಾರೆʼ ಎಂದು ಖುಷಿ ಹಂಚಿಕೊಂಡಿದ್ದಾರೆ.

ಕೋವಿಡ್‌ ನಿರ್ಬಂಧ, ಮಾರ್ಗಸೂಚಿಮಧ್ಯೆ ಶೂಟಿಂಗ್‌ ಸಾಗಿದೆ ಎಂದಿದ್ದಾರೆ ಅನೀಶ್‌. ಅಂದಹಾಗೆ ಅನೀಶ್‌ ನ್ಯಾನ್ಸಿ ರಾಣಿ ಮತ್ತು ನೆರ್ಚಪೂವನ್‌ ಚಿತ್ರದಲ್ಲೂ ಪಾತ್ರ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.