ADVERTISEMENT

ದುರ್ಗಮತಿ ಡಿ. 11ರಂದು ಅಮೆಝಾನ್‌ ಪ್ರೈಮ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 9:12 IST
Last Updated 25 ನವೆಂಬರ್ 2020, 9:12 IST
ದುರ್ಗಮತಿ ಚಿತ್ರದ ಟ್ರೈಲರ್‌ (ಟ್ವಿಟರ್‌ ಚಿತ್ರ)
ದುರ್ಗಮತಿ ಚಿತ್ರದ ಟ್ರೈಲರ್‌ (ಟ್ವಿಟರ್‌ ಚಿತ್ರ)   

‘ದುರ್ಗಮತಿ’ ಚಿತ್ರ (ತೆಲುಗಿನ ‘ಭಾಗಮತಿ’ಯ ರಿಮೇಕ್‌) ಡಿ.11ರಂದು ಅಮೆಝಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

2018ರಲ್ಲಿ ಬಿಡುಗಡೆಯಾದ ಭಾಗಮತಿ ಚಿತ್ರವೂ ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿತ್ತು. ಈಗ ಹಿಂದಿಯಲ್ಲೂ ಈ ಚಿತ್ರ ಅದೇ ನಿರೀಕ್ಷೆ ಹೊಂದಿದೆ.

ಭೂಮಿ ಪೆಡ್ನೇಕರ್‌ ‘ದುರ್ಗಮತಿ’ಯಲ್ಲಿ ಐಎಎಸ್‌ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯೊಳಗೆ ಕಿರುಕುಳಕ್ಕೊಳಗಾದ ಐಎಎಸ್‌ ಅಧಿಕಾರಿ ಚಂಚಲ್‌ ಚೌಹಾನ್‌ ಗೀಳಿಗೆ ಒಳಗಾಗುತ್ತಾಳೆ. ಅವಳಿಗೆ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು.

ADVERTISEMENT

ಆಕೆ ಸಮ್ಮೋಹನ ಶಕ್ತಿಯ ದೇವತೆಯಾಗಿ ಬದಲಾಗುವುದು, ಒಂದಿಷ್ಟು ಪವಾಡಗಳೆನ್ನುವ ಸನ್ನಿವೇಶ ಸೃಷ್ಟಿಸುವುದು ಚಿತ್ರದ ಮನೋರಂಜನಾತ್ಮಕ ಅಂಶಗಳು.

ಟ್ರೈಲರ್‌ನಲ್ಲೂ ದುರ್ಗಮತಿಯ ಪಾತ್ರದ ನಾಟಕೀಯ ಅಂಶಗಳನ್ನು ತೋರಿಸಲಾಗಿದೆ. ಚಿತ್ರವು ಆಸಕ್ತಿದಾಯಕವಾಗಿದೆ ಎಂಬ ಕುತೂಹಲ ಹುಟ್ಟಿಸುವಂತೆ ಮಾಡಿದೆ.

ಅರ್ಷದ್‌ ವಾರ್ಸಿ, ಮಹಿ ಗಿಲ್‌, ಕರನ್‌ ಕಪಾಡಿಯಾ ಮತ್ತು ಜಿಸ್ಸು ಸೆಂಗುಪ್ತಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.