ADVERTISEMENT

ಪವನ್ ಕಲ್ಯಾಣ್ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 11:19 IST
Last Updated 24 ಡಿಸೆಂಬರ್ 2020, 11:19 IST
ಪವನ್ ಕಲ್ಯಾಣ್‌
ಪವನ್ ಕಲ್ಯಾಣ್‌   

ಟಾಲಿವುಡ್‌ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ ಕೆಲ ವರ್ಷಗಳಿಂದ ರಾಜಕೀಯ ರಂಗದಲ್ಲಿ ಬ್ಯುಸಿಯಾಗಿದ್ದು ಚಿತ್ರರಂಗದಿಂದ ದೂರ ಉಳಿದಿದ್ದರು. ಇದರಿಂದ ಪವನ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಈಗ ವಕೀಲ್ ಸಾಬ್ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಲು ಸಜ್ಜಾಗಿದ್ದಾರೆ ಪವನ್‌. ಲಾಕ್‌ಡೌನ್ ಕಾರಣದಿಂದ ಕೆಲದಿನಗಳು ಸ್ಥಗಿತವಾಗಿದ್ದ ಚಿತ್ರದ ಶೂಟಿಂಗ್ ಈಗ ಪುನಃ ಆರಂಭವಾಗಿದೆ. ಪವನ್ ಕೂಡ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ನಟನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾದ ಫಸ್ಟ್‌ಲುಕ್‌ಗಾಗಿ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಸಿನಿಮಾಕ್ಕೆ ಸಂಬಂಧಿಸಿ ಪವನ್ ಅವರ ಯಾವುದೇ ಫೋಟೊಗಳು ಸಿಕ್ಕಿರಲಿಲ್ಲ.

ಆದರೆ ಅಭಿಮಾನಿಗಳ ಕಾತರಕ್ಕೆ ಉತ್ತರ ಎಂಬಂತೆ ಪವನ್‌ ಮುಂದಿನ ಚಿತ್ರದ ಲುಕ್‌ನ ಫೋಟೊಗಳು ವೈರಲ್‌ ಆಗಿದ್ದು ಪವನ್ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ಅವರ ಹೊಸ ಲುಕ್‌ನಲ್ಲಿ ಅನೇಕ ವಿಭಿನ್ನತೆಗಳು ಇರುವುದು ತಿಳಿಯುತ್ತಿದೆ.

ADVERTISEMENT

ವಕೀಲ್ ಸಾಬ್‌ ಚಿತ್ರದಲ್ಲಿ ಶೃತಿ ಹಾಸನ್, ನಿವೇತಾ ಥಾಮಸ್ ಹಾಗೂ ಅಂಜಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.