ADVERTISEMENT

ಮನೆಗೆ ಬರುವವರಿಗೆಲ್ಲ ಬಿರಿಯಾನಿ ನೀಡಿ ‘ನಾಟು ನಾಟು’ ಗಾಯಕ ರಾಹುಲ್ ಸಂಭ್ರಮಾಚರಣೆ

ಪಿಟಿಐ
Published 11 ಜನವರಿ 2023, 11:56 IST
Last Updated 11 ಜನವರಿ 2023, 11:56 IST
   

ಹೈದರಾಬಾದ್: ತೆಲುಗಿನ ಬ್ಲಾಕ್ ಬಸ್ಟರ್ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರುವುದಕ್ಕೆ ಈ ಹಾಡನ್ನು ಹಾಡಿರುವ ಗಾಯಕ ರಾಹುಲ್ ಸಿಪ್ಲಿಗಂಜ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಮನೆಗೆ ಬರುವ ಎಲ್ಲರಿಗೂ ಹೈದರಾಬಾದ್ ಬಿರಿಯಾನಿ ನೀಡುವ ಮೂಲಕ ಈ ಸಂಭ್ರಮದ ಆಚರಣೆ ಮಾಡುತ್ತೇನೆ ಎಂದು 33 ವರ್ಷದ ಗಾಯಕ ಹೇಳಿದ್ದಾರೆ.

‘ನಾಟು ನಾಟು’ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ನನಗೆ ಅತ್ಯಂತ ಸಂತಸ ಮತ್ತು ಭಾವನಾಕತ್ಮಕ ವಿಷಯವಾಗಿದೆ. ಇದು ನನ್ನ ಹಿಂದಿನ ಪಯಣದ ಬಗ್ಗೆ ಯೋಚಿಸುವಂತೆ ಮಾಡಿದೆ’ಎಂದು ರಾಹುಲ್ ಹೇಳಿದ್ದಾರೆ.

‘ತಮ್ಮ ಉತ್ಸಾಹದ ನೃತ್ಯದ ಮೂಲಕ ‘ನಾಟು ನಾಟು’ ಹಾಡಿಗೆ ಜನಪ್ರಿಯತೆ ತಂದುಕೊಟ್ಟ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರಿಗೆ ಇದರೆ ಕ್ರೆಡಿಟ್ ಕೊಟ್ಟಿದ್ದಾರೆ.

ADVERTISEMENT

‘ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಪ್ರೇಮ್ ರಕ್ಷಿತ್ ಮಾಸ್ಟರ್‌, ಜೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಅವರಿಗೆ ಆಭಾರಿಯಾಗಿದ್ದೇನೆ. ಇದೊಂದು ದೊಡ್ಡ ಸಿನಿಮಾವಾಗಿದ್ದು, ಜನ ಇದನ್ನು ಅತ್ಯಂತ ದೊಡ್ಡ ಹಿಟ್ ಸಿನಿಮಾವಾಗಿಸಿದರು’ಎಂದು ಅವರು ಬರೆದುಕೊಂಡಿದ್ಧಾರೆ.

ಈ ಹಾಡಿನಲ್ಲಿ ಇಬ್ಬರೂ ನಟರು ಹಾಕಿದ ಸ್ಟೆಪ್ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಜನಪ್ರಿಯತೆ ಗಳಿಸಿತ್ತು.

ಈ ಸಂಭ್ರಮದಲ್ಲಿ ನನ್ನ ಮನೆಗೆ ಬರುವ ಜನರಿಗೆ ಹೈದರಾಬಾದ್ ಬಿರಿಯಾನಿ ನೀಡುವ ಮೂಲಕ ಸಂಭ್ರಮಾಚರಣೆ ಮಾಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.