ವರ್ಣತರಂಗ ಚಿತ್ರತಂಡ
ಬಹುತೇಕ ಹೊಸಬರಿಂದಲೇ ಕೂಡಿರುವ ‘ವರ್ಣತರಂಗ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿ.ಶಿವಕುಮಾರ್ ನಿರ್ಮಾಣವಿದೆ.
‘ವರ್ಣತರಂಗ ಎಂದರೆ ಬಣ್ಣಗಳ ಅಲೆಗಳು ಎಂಬರ್ಥ ಕೊಡುತ್ತದೆ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ? ಎಂಬುದೇ ಕಥೆ. ಬೆಂಗಳೂರು, ಮಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕ.
ತಿಲಕ್ ಚಿತ್ರದ ನಾಯಕ. ಜೀವಿತಾ ನಾಯಕಿ, ಸಾಕ್ಷಿ ಮೇಘನಾ, ವರ್ಧನ್, ಹೇಮಂತ್, ರಮೇಶ್ ಪಂಡಿತ್, ಬಲ ರಾಜವಾಡಿ, ಟೆನ್ನಿಸ್ ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್ ಭಟ್ ಮುಂತಾದವರು ನಟಿಸಿದ್ದಾರೆ.
ಆಕಾಶ್ ರೆಡ್ಡಿ-ಯಶವಂತ್ ಭೂಪತಿ ಸಂಗೀತ, ಮನುಗೌಡ ಛಾಯಾಚಿತ್ರಗ್ರಹಣ, ವೆಂಕಿ.ಯುಡಿವಿ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.