ADVERTISEMENT

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತೆಲುಗು ನಟ ಕತ್ತಿ ಮಹೇಶ್ ನಿಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 15:06 IST
Last Updated 10 ಜುಲೈ 2021, 15:06 IST
   

ಬೆಂಗಳೂರು: ಅಪಘಾತದಿಂದ ತೀವ್ರ ಗಾಯಗೊಂಡಿದ್ದ ತೆಲುಗು ನಟ, ಸಿನಿಮಾ ವಿಮರ್ಶಕ ಕತ್ತಿ ಮಹೇಶ್ ಶನಿವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜೂನ್‌ 26ರಂದು ಅವರು ಚಲಾಯಿಸುತ್ತಿದ್ದ ಇನೋವಾ ಕಾರು ನೆಲ್ಲೂರು ಬಳಿ ಅಪಘಾತಕ್ಕೊಳಗಾಗಿತ್ತು. ಚಿತ್ತೂರಿನಿಂದ ಹೈದರಾಬಾದ್‌ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ತಲೆ ಹಾಗೂ ಮೂಗಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಅವರು, 14 ದಿನಗಳ ಕಾಲ ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದರು.

’ನೇನೆರಾಜು ನೇನೆಮಂತ್ರಿ’, ‘ಕ್ರ್ಯಾಕ್‌‘,‘ಅಮ್ಮ ರಾಜ್ಯಂಲೋ ಕಡಪ ಬಿಡ್ಡಲು’ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಬಿಗ್‌ ಬಾಸ್‌ ಸೀಸನ್‌ 1ರಲ್ಲೂ ಅವರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.