ADVERTISEMENT

ಅ.17ಕ್ಕೆ ‘ಟೈಮ್ ಪಾಸ್’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 13:16 IST
Last Updated 9 ಅಕ್ಟೋಬರ್ 2025, 13:16 IST
ವೈಸಿರಿ
ವೈಸಿರಿ   

ಸಿನಿಮಾ ಮಾಡುವ ಕನಸಿಟ್ಟುಕೊಂಡವರ ಏಳುಬೀಳಿನ ಕಥೆ ಹೊಂದಿರುವ ‘ಟೈಮ್ ಪಾಸ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕೆ.ಚೇತನ್ ಜೋಡಿದಾರ್ ನಿರ್ದೇಶನದ ಚಿತ್ರ ಅಕ್ಟೋಬರ್‌ 17ರಂದು ತೆರೆ ಕಾಣಲಿದೆ.

‘ಡಾರ್ಕ್ ಹ್ಯೂಮರ್ ಜಾನರ್‌ನ ಕಥೆಯಿದು. ಮನೋರಂಜನೆಯನ್ನೇ ಮುಖ್ಯವಾಗಿಸಿಕೊಂಡುಕಥೆ ಮಾಡಲಾಗಿದೆ. ನನ್ನ ಚೊಚ್ಚಲ ಸಿನಿಮಾ. ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಸಿನಿಮಾ ಪ್ರೇಮದಿಂದ ಎಲ್ಲವನ್ನೂ ನೋಡಿ ಕಲಿತಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. 

ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಹೆಚ್‌.ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ.ಗೌಡ, ರಕ್ಷಾರಾಮ್ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಡಿ.ಎಂ. ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ, ರಾಜೀವ್ ಗಣೇಶ್ ಛಾಯಾಚಿತ್ರಗ್ರಹಣ, ಹರಿ ಪರಮ್ ಸಂಕಲನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.