ADVERTISEMENT

‘ಗಂಧದಗುಡಿ’ಯಲ್ಲಿ ಎದ್ದು ಬಂದ ಪುನೀತ್ ರಾಜ್‌ಕುಮಾರ್: ಅಪ್ಪು ಕನಸಿನ ಯೋಜನೆ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 5:22 IST
Last Updated 6 ಡಿಸೆಂಬರ್ 2021, 5:22 IST
ಗಂಧದಗುಡಿ ಟೀಸರ್‌ನಲ್ಲಿ ಪುನೀತ್‌ ರಾಜ್‌ಕುಮಾರ್
ಗಂಧದಗುಡಿ ಟೀಸರ್‌ನಲ್ಲಿ ಪುನೀತ್‌ ರಾಜ್‌ಕುಮಾರ್   

ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆ‘ಗಂಧದಗುಡಿ’ ವಿಶೇಷ ಡಾಕ್ಯುಫಿಲ್ಮ್ ಟೀಸರ್ ಇಂದು ಅನಾವರಣಗೊಂಡಿದೆ.

PRK Audio ಯೂಟ್ಯೂಬ್‌ ಚಾನೆಲ್‌ನಲ್ಲಿ ‘ಗಂಧದಗುಡಿ’ ಟೀಸರ್ ಬಿಡುಗಡೆಯಾಗಿದ್ದು, ಪುನೀತ್ ಅವರು ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತಿನ ಬಗ್ಗೆ ಅದ್ಭುತ ಲೋಕವನ್ನು ತೆರೆದಿಟ್ಟಿದ್ದಾರೆ. ಟೀಸರ್ ಸಾಕಷ್ಟು ಕುತೂಹಲ ಕೆರಳಿಸಿದೆ.

‘ದಿ ವೈಲ್ಡ್ ಕರ್ನಾಟಕ’ ನಿರ್ದೇಶಿಸಿದ್ದ ಅಮೋಘವರ್ಷ ಅವರು ‘ಗಂಧದಗುಡಿ’ ನಿರ್ದೇಶಿಸಿದ್ದು, ಪಿಆರ್‌ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಡ್‌ಸ್ಕಿಪ್ಪರ್ ಸಂಸ್ಥೆಯವರುನಿರ್ಮಾಣ ಮಾಡಿದ್ದಾರೆ.

ADVERTISEMENT

‘ಗಂಧದಗುಡಿ’ ಚಿತ್ರೀಕರಣ ಸಂಪೂರ್ಣ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. 2022 ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ದಿನಾಂಕವನ್ನು ಪಿಆರ್‌ಕೆ ಶೀಘ್ರದಲ್ಲೇ ಘೋಷಿಸಲಿದೆ.

ಕಳೆದ ನವೆಂಬರ್ 1 ರಂದು ‘ಗಂಧದಗುಡಿ’ ಟೀಸರ್ ಅನಾವರಣಗೊಳಿಸಲು ಪುನೀತ್ ಸಿದ್ದತೆ ನಡೆಸಿದ್ದರು. ಆದರೆ, ಅವರು ಅಕ್ಟೋಬರ್ 29 ರಂದು ಅಕಾಲಿಕ ಮರಣಕ್ಕೀಡಾದರು.

ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಪ್ಪು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.