ADVERTISEMENT

ಆರ್ಥಿಕ ತಜ್ಞೆ ಸೌಂದರ್ಯ ಹೊಗಳಿ ಪೇಚಿಗೆ ಸಿಲುಕಿದ ಅಮಿತಾಬ್ ಬಚ್ಚನ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 8:57 IST
Last Updated 22 ಜನವರಿ 2021, 8:57 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: "ಅವಳ ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಗೆ ಸಂಬಂಧಿಸಿದವಳು ಎನ್ನುವುದಿಲ್ಲ" ಎಂದು ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಬಗ್ಗೆ ಜನಪ್ರಿಯ ಕ್ವಿಜ್ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಕಾಮೆಂಟ್ ಮಾಡುವ ಮೂಲಕ ಅಮಿತಾಬ್ ಬಚ್ಚನ್ ಪೇಚಿಗೆ ಸಿಲುಕಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ, ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ "ವಿಶೇಷ" ವಿಡಿಯೋವನ್ನು ಟ್ವೀಟ್ ಮಾಡಿದ್ದು, ತಮ್ಮ ಬಗೆಗಿನ ಕಾಮೆಂಟ್ ಬಗ್ಗೆ ಪ್ರಶ್ನಿಸಿದ್ದಾರೆ.

ಈ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ಪರದೆ ಮೇಲೆ ಗೀತಾ ಗೋಪಿನಾಥ್ ಅವರ ಚಿತ್ರ ಪ್ರದರ್ಶಿಸಿ, ‘ಈ ಚಿತ್ರದಲ್ಲಿ ಕಾಣುವ ಅರ್ಥಶಾಸ್ತ್ರಜ್ಞರು 2019 ರಿಂದ ಯಾವ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ" ಎಂದು ಸ್ಪರ್ಧಿಗೆ ಪ್ರಶ್ನೆ ಕೇಳುತ್ತಾರೆ. .

ADVERTISEMENT

"ಅವಳ ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಗೆ ಸಂಬಂಧಿಸಿದವಳು ಎನ್ನುವುದಿಲ್ಲ" ಎಂದು ಹೇಳುತ್ತಾರೆ.

ಇದೇವಿಡಿಯೋ ಟ್ವೀಟ್ ಮಾಡಿರುವ ಗೀತಾ ಗೋಪಿನಾಥ್ ಅವರು, ಸಾರ್ವಕಾಲಿಕ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾದ ನಾನು ಇದನ್ನು ಅವರಿಂದ ಎಂದೂ ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಗೀತಾ ಗೋಪಿನಾಥ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಧನ್ಯವಾದ ಗೀತಾ ಅವರೆ, ಕಾರ್ಯಕ್ರಮದಲ್ಲಿ ನಾನು ಬಳಸಿದ ಒಂದೊಂದು ಪದವೂ ಅತ್ಯಂತ ವಿನಯದಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಮಿತಾಬ್ ತಪ್ಪೇನೂ ಹೇಳಿಲ್ಲ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಸುಂದರವಾದ ಆರ್ಥಿಕ ಪರಿಣಿತರು ಇರುತ್ತಾರೆ ಎಂದುತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.